BELAGAVI ; ಆಟವಾಡುತ್ತಿದ್ದ ಮಗು ಮೇಲೆ ಹಾಯ್ದ ಕಾರು ; ಸ್ಥಳದಲ್ಲೇ ಸಾವು..!

ಬೆಳಗಾವಿ : ವೇಗವಾಗಿ ಬಂದ ಕಾರು ಮನೆ ಮುಂದೆ ಆಟ ಆಡುತ್ತಿದ್ದ ಒಂದುವರೆ ವರ್ಷದ ಮಗು ಮೇಲೆ ಹಾಯ್ದು, ಮಗು ಮೃತ ಪಟ್ಟಿರುವ ಘಟನೆ ನಡೆದಿದೆ.
ಖಾನಾಪುರ ತಾಲೂಕಿನ ಬೆಳಗಾವಿ-ಪಣಜಿ ಮುಖ್ಯ ರಸ್ತೆಯಿಂದ ವಾಟರೆ ಗ್ರಾಮದ ನಾಯ್ಕ್ ಗಲ್ಲಿ ಸಾರ್ವಜನಿಕ ರಸ್ತೆಯ ಕಡೆಗೆ ಅತೀ ವೇಗವಾಗಿ ಬಂದ ಕಾರು ಮನೆಯ ಮುಂದೆ ಆಟ ಆಡುತ್ತಿದ್ದ ಮಗುವಿನ ಮೇಲೆ ಹರಿದು ಹೋಗಿದೆ. ಶ್ರೀಷಾ ಸಂತೋಷ ನಾಯ್ಕ ಎಂಬ 1 ವರ್ಷ 6 ತಿಂಗಳ ಮಗು ಸಾವನ್ನಪ್ಪಿದೆ.


