ಪಂಚಮಸಾಲಿ ಹೋರಾಟದಲ್ಲಿ ಬಿರುಕು ; ಸಿಡಿದೆದ್ದ ಕಾಶಪ್ಪನವರ್
“ ಪಂಚಮಸಾಲಿ ಹೋರಾಟ ಮೊದಲು ಪ್ರಾರಂಭ ಮಾಡಿದ್ದು ನಾನು, ಸಂಘಟನೆ ಕಟ್ಟಿ ನಮ್ಮ ಸಮುದಾಯಕ್ಕೆ ಒಂದು ಪೀಠ ಬೇಕೆಂದು ನಿರ್ಧಾರ ಮಾಡಿ ಕೂಡಲಸಂಗಮ ಪೀಠ ಮಾಡಿದ್ದೇವೆ. ಆದರೆ ಶ್ರೀಗಳು ಒಂದು ಪಕ್ಷದ ಪರ ನಿಂತಿದ್ದಾರೆ. ಬೇಕಾದರೆ ಅವರು ಪೀಠವನ್ನು ಭಾರತೀಯ ಜನತಾ ಪಕ್ಷಕ್ಕೆ ಬರೆದುಕೊಡಲಿ ಎಂದು ಕಾಶಪ್ಪನವರ್ ಆಕ್ರೋಶ ಹೊರಹಾಕಿದರು ”
ಬಾಗಲಕೋಟೆ : ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರವಾಗಿ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಬಿರುಕು ಮೂಡಿದ್ದು, ಶಾಸಕ ವಿಜಯಾನಂದ ಕಾಶಪ್ಪನವರ್ ಅಪಸ್ವರ ಎತ್ತಿದ್ದಾರೆ.
ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬರುವ ಡಿ. 10 ರ ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲಿ ಬಿರುಕು ಮೂಡಿದೆ.
ಹೋರಾಟ ನಡೆಸಲಿದ್ದ ಸ್ವಾಮೀಜಿ ನಡೆಗೆ ಕಾಶಪ್ಪನವರ್ ಆಕ್ರೋಶ ಹೊರಹಾಕಿದ್ದಾರೆ. ಡಿ. 10 ರಂದು ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಮುತ್ತಿಗೆ ಹಾಕುವ ಸ್ವಾಮೀಜಿ ನಿರ್ಧಾರಕ್ಕೆ ನಮ್ಮ ಬೆಂಬಲಬಿಲ್ಲ ಎಂದು ಹೇಳಿದ್ದಾರೆ.
ಯಾರ ಜೊತೆ ಚರ್ಚೆ ನಡೆಸದೆ ಸ್ವಾಮೀಜಿ ನಿರ್ಧಾರ
ಕೈಗೊಂಡಿದ್ದಾರೆ. ಒಂದು ಪಕ್ಷದ ಪರ ನಿಂತಿದ್ದೀರಾ ಎಂದು ಪ್ರಶ್ನೆ ಮಾಡಿರುವ ಇವರು, ಶೀಘ್ರದಲ್ಲೇ ಮುಖಂಡರ ಸಭೆ ಕರೆದು ಹೋರಾಟದ ತೀರ್ಮಾಣ ಮಾಡುತ್ತೇವೆ. ಆ ಸಭೆಗೆ ತಮಗೂ ಹಾಗೂ ಯತ್ನಾಳ್ ಅವರಿಗೆ ಆಹ್ವಾನ ಇಲ್ಲ ಎಂದು ಕಾಶಪ್ಪನವರ್ ಹೇಳಿಕೆ ನೀಡಿದ್ದಾರೆ.


