Select Page

Advertisement

ಕಮಲ್ ಹಾಸನ್ ವಿರುದ್ಧ ಸಿಡಿದೆದ್ದ ಕರವೇ ಕಾರ್ಯಕರ್ತರು

ಕಮಲ್ ಹಾಸನ್ ವಿರುದ್ಧ ಸಿಡಿದೆದ್ದ ಕರವೇ ಕಾರ್ಯಕರ್ತರು

ಬೆಳಗಾವಿ : ಕನ್ನಡ ಭಾಷೆಯ ಹುಟ್ಟಿನ ಮೂಲ ತಮಿಳು ಎಂಬ ಹೇಳಿಕೆ‌ ನೀಡಿದ್ದ ಚಿತ್ರನಟ ಕಮಲ್ ಹಾಸನ್ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಬುಧವಾರ ನಗರದ ಐನಾಕ್ಸ್ ಚಿತ್ರಮಂದಿರದ ಮುಂಬಾಗ ಸೇರಿದ್ದ ಕರವೇ ಕಾರ್ಯಕರ್ತರು ಕಮಲ್ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ದೀಪಕ್ ಗುಡಗನಟ್ಟಿ, ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಕಮಲ್ ಹಾಸನ್ ಹೇಳಿಕೆ ಖಂಡನೀಯ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಇದೆ. ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗಣೇಶ ರೋಖಡೆ, ಬಾಳು ಜಡಗಿ, ಸತೀಶ ಗುಡದವರ, ಯಲ್ಲಪ್ಪಾ ತೆರಣಿ, ಪ್ರಕಾಶ ಲಮಾಣಿ, ಮಂಜುನಾಥ ರಾಠೋಡ್, ಲೋಕೇಶ್ ರಾಠೋಡ
ಅರ್ಜುನ ಕಾಂಬಳೆ, ಅಭಿಷೇಕ ಅಗಸಗಿ, ಇಸ್ಮಾಯಿಲ್ ಮುಲ್ಲಾ, ಗಂಗಾರಾಮ ಶೀಗಿಹಳ್ಳಿ, ಸಂತೋಷ್ ಚಕ್ರಯಿ,
ಭೂಪಾಲ ಅತ್ತು, ಶಿವು ಮಲಕಣ್ಣವರ, ತೇಜಸ್ವಿನಿ ಮಾನೆ,
ಗೋಪಿ ರಾಠೋಡ, ವಿನಾಯಕ ಕೋಳಿ, ಬಸವರಾಜ ಲೊಳಸುರೆ, ರಮೇಶ್ ಯರಗಣ್ಣವರ, ಸಿದ್ದಪ್ಪ ಕುರಬರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!