ಉಳವಿ ದೇವಸ್ಥಾನ ರಸ್ತೆ ದುರಸ್ತಿ ; ಕರವೇ ಮನವಿಗೆ ಸಾಹುಕಾರ್ ಸ್ಪಂದನೆ
ಬೆಳಗಾವಿ : ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಭಕ್ತರು ತೊಂದರೆ ಅನುಭವಿಸುತ್ತಿದ್ದು ಕೂಡಲೇ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಹ್ರಹಿಸಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಸಚಿವರನ್ನು ಭೇಟಿಯಾದ ಕರವೇ ಸದಸ್ಯರು, ಸುಕ್ಷೇತ್ರ ಉಳವಿ ದೇವಸ್ಥಾನಕ್ಕೆ ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಮಳೆಯಿಂದ ಪೂಟೋಳ್ಳಿ ಕ್ರಾಸ್ ನಿಂದ ಗುಂದ ಮಾರ್ಗವಾಗಿ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಕ್ಕೆ ಸಂಪರ್ಕ ಸಾಧಿಸುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಕೂಡಲೇ ಅಧಿಕಾರಿಗಳಿಗೆ ಕರೆ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡಲೇ ಉಳವಿ ಚನ್ನಬಸವೇಶ್ವರ ದೇವಸ್ಥಾನ ರಸ್ತೆ ದುರಸ್ತಿಗೆ ಸೂಚನೆ ನೀಡಿದ್ದಲ್ಲದೇ ಆದಷ್ಟು ಭೇಗ ರಸ್ತೆ ದುರಸ್ತಿಗೆ ಟೆಂಡರ್ ಕರೆಯುವಂತೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ರಾಜು ಕುಡಸೋಮಣ್ಣವರ, ಶಿವಾನಂದ ತಂಬಾಕೆ, ರಾಜು ಸೊಗಲದ, ಗಂಗಾರಾಮ ಶಿಗ್ಗಿಹಳ್ಳಿ, ರಮೇಶ ಯರಗಣ್ಣವರ, ಬಸವರಾಜ ಬೊಳಗೌಡರ, ಜಗದೀಶ ಮಾಳಗಿ ಉಪಸ್ಥಿತರಿದ್ದರು.


