
ಹುಕ್ಕೇರಿ : ಪರಭಾಷಾ ಫಲಕ ಕಿತ್ತೆಸೆದ ಕರವೇ…!

ಬೆಳಗಾವಿ : ಹುಕ್ಕೇರಿಯಲ್ಲಿ ಪರಭಾಷಾ ಫಲಕಗಳನ್ನು ಕೆಳಗಿಳಿಸುವ ಮೂಲಕ ಕನ್ನಡ ಡಿಂಡಿಮ ಬಾರಿಸುವ ಕಾರ್ಯಕ್ಕೆ ಕೈಹಾಕಲಾಗಿದೆ. ಸರ್ಕಾರದ ಆದೇಶವನ್ನೂ ಕ್ಯಾರೇ ಮಾಡದೇ ಹಲವು ಮಳಿಗೆಗಳು, ಅಂಗಡಿ ಮುಗ್ಗಟ್ಟುಗಳ ಫಲಕಕ್ಕೆ ಕೈ ಹಾಕಿದ ಪುರಸಭೆ ನಿರ್ದಾಕ್ಷಿಣ್ಯದಿಂದ ಕಿತ್ತೊಗಿದಿದೆ.
ಫಲಕದಲ್ಲಿ ಶೇ 70 ರಷ್ಟು ಕನ್ನಡ ಇರಬೇಕು. ಹಾಗೂ ಪ್ರತಿ ವ್ಯಾಪಾರ ಮಳಿಗೆಗಳೂ ಕನ್ನಡ ನಾಮಫಲಕವನ್ನು ಹೊಂದಿರಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಹಲವು ಅಂಗಡಿಗಳು ಇದನ್ನು ಪಾಲಿಸದೇ ಇಂಗ್ಲಿಷ್ ನಾಮಫಲಕವನ್ನೇ ಮುಂದುವರೆಸಿದ್ದರು.
ಇನ್ನೂ ಕೆಲವರು ಎಲ್ಲೋ ಮೂಲೆಯಲ್ಲಿ ಕನ್ನಡದಲ್ಲಿ ಹೆಸರು ಹಾಕಿ ಬೃಹತ್ ಗಾತ್ರದಲ್ಲಿ ಇಂಗ್ಲಿಷ್ ಭಾಷೆಯ ನಾಮಫಲಕ ಪ್ರದರ್ಶಿಸಿದ್ದರು. ಇಂಥಾ ಫಲಕಗಳನ್ನು ಕಿತ್ತೊಗೆದ ಪುರಸಭೆ ಕಾರ್ಯಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಅಂಗಡಿಗಳಿಗೂ ಪುರಸಭೆ ಒಂದು ವಾರದ ಗಡುವು ನೀಡಿದ್ದು ಅಷ್ಟರೊಳಗೆ ಕನ್ನಡ ನಾಮಫಲಕ ಬದಲಿಸಿದಿದ್ದರೆ ಅಂಗಡಿ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.