Select Page

Advertisement

ಕಾಗವಾಡ ಕೊಲೆ ರಹಸ್ಯ ಬಯಲು : 20 ಸಾವಿರಕ್ಕೆ ಕೊಲೆಗೈದ ದುರುಳ

ಕಾಗವಾಡ ಕೊಲೆ ರಹಸ್ಯ ಬಯಲು : 20 ಸಾವಿರಕ್ಕೆ ಕೊಲೆಗೈದ ದುರುಳ



ಬೆಳಗಾವಿ : ಕಬ್ಬಿನ ಗದ್ದೆಗಳಲ್ಲಿ ವ್ಯಕ್ತಿಯ ತಲೆ‌ ಮೇಲೆ ಕಲ್ಲು ಹಾಕಿ ಹತ್ಯೆ‌ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌

ಇದೇ ಜುಲೈ 20 ರಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಹೊವಲಯದಲ್ಲಿ ಶಶಿಕಾಂತ್ ಹೊನ್ನಕಾಂಬಳೆ(40) ಕೊಲೆಯಾಗಿತ್ತು. ನಳೀನ್ ಎನ್ನುವವರ ಗದ್ದೆಯಲ್ಲಿ ಶಶಿಕಾಂತ್ ಹೊನ್ನಕಾಂಬಳೆ ಎನ್ನುವವರ ಶವ ಸಿಕ್ಕಿತ್ತು.

ಈ‌ ಕುರಿತು ದಾಖಲಾಗಿದ್ದ ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಕೊಲೆ ಆರೋಪಿ ಬಲೆಗೆ ಬಿದ್ದಿದ್ದಾನೆ. ಕೊಲೆಯಾದ ಶಶಿಕಾಂತ ಪ್ರಕರಣದಲ್ಲಿ ಶೇಡಬಾಳ ಗ್ರಾಮದ ಮೈಮುದ್ದಿನ್ ಜಮಾದಾರ್ ಎಂಬಾತನನ್ನು ಪೊಲೀಸರು ಬಂಧಸಿದ್ದಾರೆ.

ಕೊಲೆಯಾದ ಶಶಿಕಾಂತ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಮೈಮುದ್ದಿನ್ ಶಶಿಕಾಂತ್ ಬಳಿ ಬಡ್ಡಿಗೆ ಹಣವನ್ನು ತೆಗೆದುಕೊಂಡಿದ್ದ,ಮುಂಚೆ ಎಲ್ಲಾ ಹಣ ತೆಗೆದುಕೊಂಡ ಹಣಕ್ಕೆ ಬಡ್ಡಿ ನೀಡಿ ಮೈಮುದ್ದಿನ್ ಸಾಲ ತೀರಿಸಿದ್ದ.

ನಂತರ ಶಶಿಕಾಂತ ಬಳಿ ಮರಳಿ 20 ಸಾವಿರ ರೂಪಾಯಿ ಸಾಲವನ್ನು ಮೈಮುದ್ದಿನ್ ಪಡೆದಿದ್ದ .ಇದಕ್ಕೆ ಹೆಚ್ಚಿಗೆ ಬಡ್ಡಿಯನ್ನ ಶಶಿಕಾಂತ್ ಹೊನ್ನಕಾಂಬಳೆ ಹಾಕಿದ್ದ ಮೈಮುದ್ದಿನ್ ತಾನು ಬಡ್ಡಿಗೆ ಪಡೆದ ಹಣವನ್ನು 19 ನೇ ತಾರೀಕೂ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ.

ಶಶಿಕಾಂತ ಇಟ್ಟುಕೊಂಡಿದ್ದ ಹೂವಿನ ಅಂಗಡಿಯ ಬಳಿ ಹೋಗಿ ಹಣ ಕೊಡುವೆ ಎಂದು ಗದ್ದೆಗೆ ಕರೆದುಕೊಂಡು ಹೋಗಿ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಮೈಮುದ್ದಿನ್ ಶಶಿಕಾಂತನನ್ನು ಕೊಲೆ ಮಾಡಿ ಕೊಲೆ ಮಾಡಿ ನಂತರ ಕೊಲೆಗೆ ಬಳಸಿದ ಕಲ್ಲು ಹಾಗೂ ಮೃತ ಶಶಿಕಾಂತನ ಮೊಬೈಲ್ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಕೃಷಿ ಹೊಂಡಕ್ಕೆ ಹಾಕಿ ಸ್ಥಳದಿಂದ ಕಾಲ್ಕಿತ್ತಿದ್ದ.

ವೃತ್ತಿಯಲ್ಲಿ ಚಿಕನ್ ಬಿರಿಯಾನಿ ಅಂಡಗಿ ಇಟ್ಟುಕೊಂಡಿದ್ದ ಮೈಮುದ್ದಿನ್ ಸಧ್ಯ ಕೊಲೆ ಪ್ರಕರಣದಲ್ಲಿ ಕಾಗವಾಡ ಪೊಲೀಸರ ಅತಿಥಿಯಾಗಿದ್ದು‌ ಕೇವಲ 20 ಸಾವಿರ ರೂಪಾಯಿಗಾಗಿ ಕೊಲೆ ನಡೆದಿದೆ ಎಂದು ಮಾಧ್ಯಮಗಳಿಗೆ ಎಸ್ಪಿ ಡಾ, ಭೀಮಾಶಂಕರ್ ಗುಳೇದ ತಿಳಿಸಿದರು.


Advertisement

Leave a reply

Your email address will not be published. Required fields are marked *

error: Content is protected !!