ಸಾಹುಕಾರ್ ಸಿಡಿ ಗ್ಯಾಂಗ್ ಹಿಂದಿದ್ದ ಪತ್ರಕರ್ತ ಸಧ್ಯ ರಾಜಣ್ಣ ಹನಿಟ್ರ್ಯಾಪ್ ನಲ್ಲಿ ಕೆಲಸ..?
ಬೆಳಗಾವಿ ವಾಯ್ಸ್ : ಅಂದು ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರನ್ನು ಅಶ್ಲೀಲ ಸಿಡಿ ಬಲೆಗೆ ಕೆಡವಿದ್ದ ಗ್ಯಾಂಗ್ ಈಗ ಸಚಿವ ರಾಜಣ್ಣ ಬೆನ್ನ ಹಿಂದೆ ಬಿದ್ದಿತ್ತು ಎಂಬ ಸ್ಪೋಟಕ ಸತ್ಯ ಬಯಲಾಗಿದೆ.
ಹೌದು ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಅಶ್ಲೀಲ ಖೆಡ್ಡಾಗಿ ಕೆಡವಿ ಅವರ ಮಂತ್ರಿ ಪದವಿಗೆ ಕುತ್ತು ತಂದಿದ್ದ ಗ್ಯಾಂಗ್ ಈಗ ರಾಜಣ್ಣ ಅವರಿಗೆ ಹನಿ ಟ್ರ್ಯಾಪ್ ಪ್ಲ್ಯಾನ್ ಹಾಕಿತ್ತಂತೆ.
ಚಿನ್ನಿ ಗ್ಯಾಂಗ್ ನ ಸದಸ್ಯ ಹಾಗೂ ಪತ್ರಕರ್ತ ಸಧ್ಯ ರಾಜಣ್ಣ ಹನಿ ಟ್ರ್ಯಾಪ್ ವಿಚಾರವಾಗಿ ಕೆಲಸ ಮಾಡಿದ್ದ ಎಂಬ ಸತ್ಯ ರಾಜ್ಯ ಗುಪ್ತಚರ ವರದಿಯಿಂದ ಬಯಲಾಗಿದೆ. ಈ ಕುರಿತು ಅಧಿಕಾರಿಗಳು ಸಿಎಂ ಅವರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಹನಿ ಟ್ರ್ಯಾಪ್ ವಿಚಾರವಾಗಿ ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರನನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

