ಗಾಂಧಿ, ವಾಜಪೇಯಿನೇ ಪ್ಯಾಲೆಸ್ಟೈನ್ ಬೆಂಬಲಿಸಿದ್ದರು – ಕಾಂಗ್ರೆಸ್ ನಡೆ ಸಮರ್ಥಿಸಿಕೊಂಡ ಶೆಟ್ಟರ್
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ಪ್ಯಾಲೆಸ್ಟೈನ್ ಬೆಂಬಲಿಸಿರುವ ವಿಚಾರವಾಗಿ ಜಗದೀಶ್ ಶೆಟ್ಟರ್ ಈ ಹಿಂದೆ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಪ್ಯಾಲೆಸ್ಟೈನ್ ಬೆಂಬಲಿಸಿದ್ದರು ಎಂದು ಕಾಂಗ್ರೆಸ್ ನಡೆ ಸಮರ್ಥಿಸಿಕೊಂಡಿದ್ದಾರೆ.
ಹೌದು ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಭಾರತ ಇಸ್ರೇಲ್ ಗೆ ಬೆಂಬಲ ನೀಡಿದೆ. ಆದರೆ ಸಧ್ಯ ಕಾಂಗ್ರೆಸ್ ಮಾತ್ರ ಪ್ಯಾಲೆಸ್ಟೈನ್ ಗೆ ಬೆಂಬಲ ನೀಡುವ ವಿಚಾರ ಮಾತನಾಡಿದ್ದು ಇದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಧ್ವನಿಗೂಡಿಸಿದ್ದಾರೆ.
ಪ್ಯಾಲೆಸ್ಟೈನ್ ಗೆ ಈ ಹಿಂದೆ ಗಾಂಧಿ, ಹಾಗೂ ವಾಜಪೇಯಿ ಬೆಂಬಲ ಕೊಟದಟಿದ್ದರು. ಆಯಾ ಸಂದರ್ಭಕ್ಕೆ ತಕ್ಕಂತೆ ನೀತಿ ಬದಲಾಗುತ್ತವೆ. ಆದರೆ ಈ ಕುರಿತು ಕೇಂದ್ರ ಸರ್ಕಾರ ಸರ್ವಪಕ್ಷದ ನಾಯಕರನ್ನು ಕರೆದು ಒಟ್ಟಾಗಿ ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ.


