Select Page

Advertisement

ಲಂಚ ಪಡೆಯುತ್ತಿದ್ದಾಗ ಪೊಲೀಸ್ ಬೆಲೆಗೆ ಬಿದ್ದ ಐಟಿ ಅಧಿಕಾರಿ ; ಸಿನಿಮೀಯ ರೀತಿಯಲ್ಲಿ ಚೇಸ್

ಲಂಚ ಪಡೆಯುತ್ತಿದ್ದಾಗ ಪೊಲೀಸ್ ಬೆಲೆಗೆ ಬಿದ್ದ ಐಟಿ ಅಧಿಕಾರಿ ; ಸಿನಿಮೀಯ ರೀತಿಯಲ್ಲಿ ಚೇಸ್

ಬೆಳಗಾವಿ : ಭ್ರಷ್ಟರ ಭೇಟೆಯಾಡಬೇಕಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೋರ್ವ ಚಿನ್ನಾಭರಣ ವ್ಯಾಪಾರಿಗೆ ಐದು ಲಕ್ಷ ರೂ. ಹಣದ ಬೇಡಿಕೆ ಇಟ್ಟು ವ್ಯವಹಾರ ಕುದುರಿಸುವಾಗಲೇ ಬೆಳಗಾವಿ ಎಪಿಎಂಸಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.

ಚಿಕ್ಕೋಡಿ ತಾಲೂಕಿನ ಅಂಕಲಗಿ ಗ್ರಾಮದ ಚಿನ್ನಾಭರಣ ವ್ಯಾಪಾರಿ ಪರಶುರಾಮ ಬಂಕಾಪುರ ಎಂಬ ವ್ಯಕ್ತಿಗೆ ನೀನು ಬ್ಲಾಕ್ ಮೇಲ್ ಮಾಡಿ ನೀನು ಮನಿ ಲ್ಯಾಂಡ್ರಿಂಗ್ ಮಾಡುತ್ತಿಯಾ ನಿಂದು ಅನಧಿಕೃತ ವ್ಯಾಪಾರ ಇದೆ ಎಂದು ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಖತರನಾಕ ಆದಾಯ ತೆರಿಗೆ ಇಲಾಖೆ ಅಧಿಕಾರಿ.

ದಿನಕ್ಕೊಂದು ಲೊಕೆಷನ್ ಕಳಿಸಿ ಈ ಜಾಗಕ್ಕೆ ಹಣ ತಂದು ಕೊಡು ಎಂದು ಪೀಡಿಸುತ್ತಿದ್ದ. ಈ ವಿಷಯವನ್ನ ಕೂಡಲೇ ಪರಶುರಾಮ್ ಮಾರ್ಕೆಟ್ ವಿಭಾಗದ ಎಸಿಪಿ ನಾರಯಣ ಬರಮನಿಯವರಿಗೆ ತಿಳಿಸಿದಾಗ ಅವರು ತಮ್ಮ ತಂಡವನ್ನು ಕಳುಹಿಸಿ ಆದಾಯ ತೆರಿಗೆ ಅಧಿಕಾರಿಯನ್ನ ಹಣ ಪಡೆಯುವಾಗಲೇ ಖೆಡ್ಡಾಕೆ ಕೆಡವಿ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಅಂಕಲಿಯಲ್ಲಿರುವ ಪರಶುರಾಮ್ ಅವರ ಅಂಗಡಿಗೆ ತಮ್ಮ ಸಿಬ್ಬಂದಿಗಳೊಂದಿಗೆ ಹೋಗಿದ್ದ ಆದಾಯ ತೆರಿಗೆ ಅಧಿಕಾರಿ ಟೋನಪೆ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಪರಶುರಾಮ್ ಪೊಲೀಸರಿಗೆ ತಿಳಿಸಿ ಕವರ್ ನಲ್ಲಿ 40 ಸಾವಿರ ಹಣ ಇಟ್ಟಕೊಂಡು ಟೊಣಪೆ ಹೇಳಿದ ಜಾಗಕ್ಕೆ ಹೋಗಿ ನಿಂತಿದ್ಧರು.

ಮಪ್ತಿಯಲ್ಲಿದ್ದ ಪೊಲೀಸರು ಟೊಣಪೆ ಹಣ ಪಡೆಯುತ್ತಿದ್ದಂತೆ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!