Select Page

Advertisement

ಬೆಳಗಾವಿಯಲ್ಲಿ ಸೇವೆ ಸಲ್ಲಿಸಿ ಜನರ ಹೃದಯ ಗೆದ್ದ ಐವರು ಪೊಲೀಸ್ ಅಧಿಕಾರಿಗಳಿಗೆ ಪದಕ

ಬೆಳಗಾವಿಯಲ್ಲಿ ಸೇವೆ ಸಲ್ಲಿಸಿ ಜನರ ಹೃದಯ ಗೆದ್ದ ಐವರು ಪೊಲೀಸ್ ಅಧಿಕಾರಿಗಳಿಗೆ ಪದಕ



ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಕರ್ತವ್ಯ ‌ನಿರ್ವಹಿಸುವ ಜೊತೆ ಇಲ್ಲಿನ ಜನರ ಹೃದಯದಲ್ಲಿ ಪ್ರೀತಿಯ ಬೆಸುಗೆ ಬೆಸೆಯುವಲ್ಲಿ ಯಶಸ್ವಿಯಾಗಿರುವ ಐವರು ಹಿರಿಯ ‌ಪೊಲೀಸ್ ಅಧಿಕಾರಿಗಳು ಡಿಜಿ ಮತ್ತು ಐಜಿಪಿ ಪದಕಕ್ಕೆ ಭಾಜನರಾಗಿದ್ದಾರೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕರ್ತವ್ಯ ‌ನಿರ್ವಹಿಸಿದ್ದ ಐಜಿಪಿ ಸಂದೀಪ್ ಪಾಟೀಲ್, ಬೆಳಗಾವಿ ‌ನಗರ ಪೊಲೀಸ್ ಆಯುಕ್ತರಾಗಿದ್ದ ಡಿಐಜಿಪಿ ಡಾ. ಬೋರಲಿಂಗಯ್ಯ ಎಂ.ಬಿ, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎಐಜಿಪಿ ಡಾ. ಸಂಜೀವ್ ಪಾಟೀಲ್, ಬೆಳಗಾವಿ ನಗರದಲ್ಲಿ ಡಿಸಿಪಿ ಆಗಿ ಕರ್ತವ್ಯ ‌ನಿರ್ವಹಿಸಿದ್ದ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯಾದ ವಿಕ್ರಂ ಆಮ್ಟೆ ಅವರಿಗೆ ಡಿಜಿ ಮತ್ತು ಐಜಿಪಿ‌ ಪದಕ ಲಭಿಸಿದೆ.

ಬೆಳಗಾವಿ ಚಳಿಗಾಲದ ಅಧಿವೇಶನ, ಕೊರೋನಾ ಮಹಾಮಾರಿ, ಗಡಿ ಜಿಲ್ಲೆಯ ಭಾಷಾ ವೈಷಮ್ಯ, ಸೇರಿದಂತೆ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಂತಹ ದೊಡ್ಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆ ಜನಸಾಮಾನ್ಯರ ಹೃದಯದಲ್ಲಿಯೂ ಗಟ್ಟಿ ಸ್ಥಾನ ಪಡೆದುಕೊಂಡ ಅಪರೂಪದ‌ ಅಧಿಕಾರಿಗಳ‌ ಯಶಸ್ಸ‌ನ್ನು ಇಲ್ಲಿಯ‌ ಜನ ನಿರಂತರವಾಗಿ ಸಂಭ್ರಮಿಸುವುದರಲ್ಲಿ ಸಂಶಯವಿಲ್ಲ.

***************

ಪದ ವಿಜೇತ ಬೆಳಗಾವಿ ಪೊಲೀಸ್ ಅಧಿಕಾರಿಗಳು

ರಾಜ್ಯ ಪೊಲೀಸ್ ಇಲಾಖೆಯಿಂದ‌ ಕೊಡಮಾಡುವ ಡಿಜಿ ಮತ್ತು ಐಜಿಪಿ‌ ಪ್ರಶಸ್ತಿಗೆ ಬೆಳಗಾವಿಯ ಒಂಬತ್ತು ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.‌

ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಥೋರ್, ನಗರ ಪೊಲೀಸ್ ಆಯುಕ್ತ, ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಶ್ರುತಿ ಎನ್.ಎಸ್, ಬೆಳಗಾವಿ ನಗರ ಸಿಇಎನ್ ಠಾಣೆ ಸಿಪಿಐ ಬಿ.ಆರ್ ಗಡ್ಡೆಕರ್,
ನಿಪ್ಪಾಣಿ ಠಾಣೆ ಸಿಪಿಐ ಬಾಳಪ್ಪ ತಳವಾರ.

ಕೆಎಸ್ಆರ್ಪಿ ಸ್ಪೆಷಲ್ ಆರ್ಪಿಐ ಪಂದಪ್ಪ ಗಿರಡ್ಡಿ, ಪಿಟಿಎಸ್ ಕಂಗ್ರಾಳಿ ಸ್ಪೆಷಲ್ ಆರ್ ಹೆಚ್ ಸಿ ಬಸಪ್ಪ ತೋಟದ, ಬೆಳಗಾವಿ ಡಿಪಿಒ‌ ಅಪರಾಧ ವಿಭಾಗದ ಪೇದೆ ಶ್ರೀಶೈಲ ಬಳಿಗಾರ ಹಾಗೂ ಕೆಎಸ್ಆರ್ಪಿ WRHC ಅಶ್ವಿನಿ ಮೂಲಿಮನಿ ಪದಕ ಪಡೆದಿದ್ದಾರೆ.

ಪೊಲೀಸ್ ಇಲಾಖೆ 2024-25ರ ಸೇವೆಯನ್ನು ಪರಿಗಣಿಸಿ ಈ ಮೆಡಲ್ ನೀಡಲಾಗಿದ್ದು, ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಇದೇ ಮೇ.21ರಂದು ಪದಕ ನೀಡಿ ಗೌರವಿಸಲಾಗುತ್ತದೆ.


Advertisement

Leave a reply

Your email address will not be published. Required fields are marked *

error: Content is protected !!