ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಪೋಟ ; ಸಾವಿನ ಸಂಖ್ಯೆ 7 ಕ್ಕೆ ಏರಿಕೆ
ಬೆಳಗಾವಿ : ಬೈಲಹೊಂಗಲ ತಾಲೂಕಿನ ಇನಾಮದಾರ್ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಘಟನೆಯಲ್ಲಿ ಸಾವಿಗೀಡಾದವರ ಅಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಇಂದು ಮಂಜುನಾಥ ತೇರದಾಳ, ಮಂಜುನಾಥ ಕಾಜಗಾರ, ಬರತೇಶ್ ಸಾರವಾಡಿ, ಗುರುಪಾದಪ್ಪ ಸಾವಣಪ್ಪಿದ್ದಾರೆ. ಮೃತರು ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಿನ್ನೆ ಅಕ್ಷಯ ತೋಪಡೆ, ದೀಪಕ್ ಮುನ್ನೋಳಿ, ಸುದರ್ಶನ್ ಬನೋಶಿ ಎಂಬ ಮೂವರು ಕಾರ್ಮಿಕರು ನಿಧನರಾಗಿದ್ದರು.
ಕಾರ್ಖಾನೆಯ ನಂ 1 ಕಂಪಾರ್ಟಮೇಂಟಿನಲ್ಲಿ ಘಟನೆ ಸಂಭವಿಸಿದ್ದು ವಾಲ್ ರಿಪೇರಿ ಮಾಡುವ ವೇಳೆ ಬ್ಲಾಸ್ಟ್ ಸಂಭವಿಸಿದೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


