Select Page

Advertisement


ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಇಡಾ ಮಾರ್ಟಿನ್ ನೇಮಕ

<br />ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಇಡಾ ಮಾರ್ಟಿನ್ ನೇಮಕ

ಬೆಳಗಾವಿ : ನಗರ ಪೊಲೀಸ್ ಆಯುಕ್ತರಾಗಿ ಇಡಾ ಮಾರ್ಟಿನ್ ಅವರಿಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಇಡಾ ಮಾರ್ಟಿನ್ ಅವರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಮರ್ಥವಾಗಿ ನಡೆಸಲು ಸಹಕಾರಿಯಾಗಿದ್ದರು. ಇವರು ಜನಸ್ನೇಹಿ ಪೊಲೀಸ್ ಆಡಳಿತಕ್ಕೆ ಮಾದರಿಯಾದವರು. ಈಗ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದಾರೆ.

ಇಡಾ ಮಾರ್ಟಿನ್ ಅವರು 2009 ನೇ ಬ್ಯಾಚ್‌ ಕರ್ನಾಟಕ ಕೇರಡರನ ಐಪಿಎಸ್‌ ಅಧಿಕಾರಿಯಾಗಿರುವ ಇಡಾ ಮಾರ್ಟಿನ್‌ ಸದ್ಯ ನೇಮಕಾತಿ ವಿಭಾಗದಲ್ಲಿ ಡಿಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೊಲೀಸ್‌ ಆಯುಕ್ತರಾಗಿದ್ದ ಸಿದ್ದರಮಪ್ಪಾ ಎಸ್‌.ಎನ್‌ ಅವರು ಫೆ.29 ರಂದು ವಯೋನಿವೃತ್ತಿ ಹೊಂದಿದರು. ಅವರ ಜಾಗಕ್ಕೆ ಈಗ  ಇಡಾ ಮಾರ್ಟಿನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!