BREAKING : ಹಿಪ್ಪರಗಿ ಆಣೆಕಟ್ಟು ಗೇಟಿಗೆ ಹಾನಿ ; ಹರಿದು ಹೋಗುತ್ತಿರುವ ಅಪಾರ ನೀರು
ಅಥಣಿ : ಹಿಪ್ಪರಗಿ ಆಣೆಕಟ್ಟು ಮೊದಲ ಕ್ರೆಸ್ಟ್ ಗೇಟಿಗೆ ಹಾನಿಯಾದ ಹಿನ್ನಲೆಯಲ್ಲಿ ಅಪಾರ ಪ್ರಮಾಣದಲ್ಲಿ ಹಿನ್ನೀರು ಹರಿದು ಹೋಗುತ್ತಿದೆ.
ಅಥಣಿ ಹಾಗೂ ಜಮಖಂಡಿ ತಾಲೂಕಿನ ಮಧ್ಯದಲ್ಲಿ ಕೃಷ್ಣಾ ನದಿಗೆ ಇರುವ 6 ಟಿಎಂಸಿ ಸಾಮಥ್ರ್ಯದ ಹಿಪ್ಪರಗಿ ಆಣೆಕಟ್ಟು ಬಾಗಿಲಿಗೆ ಹಾನಿಯಾಗಿದೆ.
ಈ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದು ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.


