Select Page

Advertisement

SSLC ವಿದ್ಯಾರ್ಥಿಗಳಿಗೆ ಹಾರೂಗೇರಿಯಲ್ಲಿ ರಸಪ್ರಶ್ನೆ ಸ್ಪರ್ಧೆ

SSLC ವಿದ್ಯಾರ್ಥಿಗಳಿಗೆ ಹಾರೂಗೇರಿಯಲ್ಲಿ ರಸಪ್ರಶ್ನೆ ಸ್ಪರ್ಧೆ

ಹಾರೂಗೇರಿ : ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳಸಿ ಓದುವ ಹವ್ಯಾಸ ಹೆಚ್ಚಿಸಲು SSLC ವಿದ್ಯಾರ್ಥಿಗಳಿಗೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮಾದರಿಯಲ್ಲಿ  ರಸಪ್ರಶ್ನೆ ಸ್ಪರ್ಧೆಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯ ಜನತಾ ಶಿಕ್ಷಣ ಸಂಸ್ಥೆಯಲ್ಲಿ(ಕರ್ಣವಾಡಿ ಶಾಲೆ) ಅಗಷ್ಟ 13 ರಂದು ಆಯೋಜಿಸಲಾಗಿದೆ.

ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಈ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ತಂಡಗಳು ಅಗಷ್ಟ್ 8 ರಂದು ಸಂಜೆ 4 ಗಂಟೆಯೊಳಗಾಗಿ 100 ರೂ ಪ್ರವೇಶ ಶುಲ್ಕ ಭರಿಸಿ ಹೆಸರು ನೊಂದಾಯಿಸಬೇಕು. ಸ್ಪರ್ಧೆ ಜರುಗುವ ದಿನದಂದು ಕಡ್ಡಾಯವಾಗಿ ಶಾಲೆಯ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು. 

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜಯಶಾಲಿಯಾಗುವ ತಂಡಗಳಿಗೆ ಕ್ರಮವಾಗಿ 10, ಸಾವಿರˌ 7ˌ5ˌ4ˌ3ˌ2ˌ1ˌ500 ರೂಗಳನ್ನು ಬಹುಮಾನವಾಗಿ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಪ್ರಧಾನ ಸಂಘಟಕ ಸಂತೋಷ ತಮದಡ್ಡಿಯವರನ್ನು (9591319967)

ಸಂಪರ್ಕಿಸಬಹುದಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!