ಹಾರೂಗೇರಿ – ಕುಡಿದು ಗಲಾಟೆ ಮಾಡುತ್ತಿದ್ದ ಮಗನನ್ನು ಕೊಂದು ಅಂತ್ಯಸಂಸ್ಕಾರ ನೆರವೇರಿಸಿದ ತಂದೆ
ಬೆಳಗಾವಿ : ಕುಡಿದು ಗಲಾಟೆ ಮಾಡುತ್ತಿದ್ದ ಮಗನಿಂದ ಬೇಸತ್ತು ತಂದೆ ಹಾಗೂ ಸಹೋದರ ಸೇರಿ ಯುವಕನನ್ನು ಕೊಂದು ಅಂತ್ಯಸಂಸ್ಕಾರ ಮಾಡಿದ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಿಡಕಲ್ ಗ್ರಾಮದ ಹೊಸಟ್ಟಿ ತೋಟದ ಮನೆಯಲ್ಲಿ ಜು.8ರಂದು ರಾತ್ರಿ ಸಮಯದಲ್ಲಿ ಮೃತ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮದ್ಯ ಸೇವನೆ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ಈ ವೇಳೆ ತಂದೆಯ ಜತೆಗೆ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೃತನ ಸಹೋದರ ಬಸಯ್ಯ ಹಿರೇಮಠ ಮತ್ತು ತಂದೆ ಸೇರಿಕೊಂಡು ಆಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ.
ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ (54), ಬಸಯ್ಯ ಹಿರೇಮಠ (26) ಬಂಧನ ಮಾಡಲಾಗಿದೆ.
ಮೃತ ಸೋಮಯ್ಯ ಶವವನ್ನು ಜಮೀನಿನಲ್ಲಿ ಸುಟ್ಟು ಅಂತ್ಯಕ್ರಿಯೆ ನೆರವೇರಿಸಿದ್ದರು. ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಚಿತಾಗಾರದಿಂದ ಅಸ್ಥಿಪಂಜರದ ಅವಶೇಷಗಳನ್ನು ಪರಿಶೀಲಿಸಿ ಕೊಲೆ ಬೇದಿಸುವಲ್ಲಿ ಯಶಸ್ವಿ ಯಾಗಿದ್ದಾರೆ.


