ಹರಿಯಾಣದಲ್ಲಿ ಉಲ್ಟಾ ಹೊಡೆದ ಫಲಿತಾಂಶ ; ಬಿಜೆಪಿ ಮುನ್ನಡೆ
ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ ಹರಿಯಾಣ ಹಾಗೂ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬರುತ್ತಿದ್ದು 10 ಗಂಟೆ ಮತ ಎಣಿಕೆಯಲ್ಲಿ ನಾಟಕೀಯ ಬೆಳವಣಿಗೆ ನಡೆಯುತ್ತಿದೆ.
ಹರಿಯಾಣದಲ್ಲಿ ಮತ ಎಣಿಕೆ ಪ್ರಾರಂಬದಿಂದ ಸುಮಾರು 10 ಗಂಟೆಯವರೆಗೆ ಮುನ್ನಡೆ ಯಾಕ್ದುಕೊಂಡಿದ್ದ ಕಾಂಗ್ರೆಸ್ 52 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಸಧ್ಯ ಪರಿಸ್ಥಿತಿ ಬದಲಾಗಿದ್ದು 48 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿ ಬಹುಮತದ ಸಂಖ್ಯೆ ಗಳಿಸಿದ್ದು 50 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 23 ಸ್ಥಾನದಲ್ಲಿ ಮುನ್ನಡೆ ಹೊಂಡಿದೆ.


