ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ (Gruhalakshmi) ಯೋಜನೆಯ ಫಲಾನುಭವಿಗಳಿಗೆ ಯೋಜನೆಯ 31ನೇ ಕಂತಿನ ಒಟ್ಟು ₹2,400 ಕೋಟಿ ರೂಪಾಯಿ ಹಣವನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ರಾಜ್ಯದ ಲಕ್ಷಾಂತರ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ತಲಾ ₹2,000 ಹಣ ಜಮೆಯಾಗಲು ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದಲ್ಲಿ ಈ ಯೋಜನೆ ಆರಂಭವಾದಿನಿಂದ ಇದುವರೆಗೆ ಭಾರಿ ಪ್ರಮಾಣದ ಹಣವನ್ನು ಮಹಿಳೆಯರ ಸಬಲೀಕರಣಕ್ಕಾಗಿ ಖರ್ಚು ಮಾಡಲಾಗಿದೆ.

ರಾಜ್ಯದ ಸುಮಾರು 1,24,48,000 (1.24 ಕೋಟಿ) ಹೆಣ್ಣು ಮಕ್ಕಳ ಖಾತೆಗಳಿಗೆ ಇದಾಗಲೇ ಕಳೆದ 30 ಕಂತುಗಳಲ್ಲಿ ತಲಾ ₹2,000 ರಂತೆ ಒಟ್ಟು ₹60,000 ಹಣವನ್ನು ಯಶಸ್ವಿಯಾಗಿ ವರ್ಗಾಯಿಸಲಾಗಿದೆ. 31ನೇ ಕಂತಿನ ಹಣ ಬಿಡುಗಡೆಯಾಗಿದೆ.

ಈ 31ನೇ ಕಂತಿನ ಹಣವೂ ಬಿಡುಗಡೆಯಾಗಿದ್ದು, ಇದರಿಂದಾಗಿ ಪ್ರತಿಯೊಬ್ಬ ಗೃಹಲಕ್ಷ್ಮಿ ಖಾತೆಗೆ ಸರ್ಕಾರದ ವತಿಯಿಂದ ಜಮೆಯಾಗುವ ಒಟ್ಟು ಮೊತ್ತ ಬರೋಬ್ಬರಿ ₹62,000 ತಲುಪಿದಂತಾಗಿದೆ.

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಈ ಹೆಜ್ಜೆಯಿಂದಾಗಿ, ಗೃಹಲಕ್ಷ್ಮಿ ಯೋಜನೆಯಾಗಿ ರಾಜ್ಯ ಸರ್ಕಾರ ಇದುವರೆಗೂ ಒಟ್ಟಾರೆಯಾಗಿ ₹74,650 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ದೇಶದಲ್ಲೇ ಇಷ್ಟು ದೊಡ್ಡ ಮೊತ್ತದ ಮೊತ್ತವನ್ನು ಮಹಿಳೆಯರ ಖಾತೆಗೆ ನೇರವಾಗಿ ಪಾವತಿಸಿದ ಹಗ್ಗಳಿಕೆಗೆ ಈ ಯೋಜನೆ ಪಾತ್ರವಾಗಿದೆ.

ಮಹಿಳೆಯರು ಈ ಆರ್ಥಿಕ ನೆರವನ್ನು ತಮ್ಮ ಕುಟುಂಬದ ದೈನಂದಿನ ಖರ್ಚಿನ, ಕೌಟುಂಬಿಕ ಖರ್ಚುಗಳು, ಮಕ್ಕಳ ಶಿಕ್ಷಣ, ಆರೋಗ್ಯ, ವೈಯಕ್ತಿಕ ಆಹಾರ ಹಾಗೂ ಇತರ ಅನಿವಾರ್ಯ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.