Select Page

Advertisement

ಮಾಜಿ ಶಾಸಕ ಸಾವು ; ಆರೋಪಿ ಮುಜಾಹಿದಿಲ್ ವಿರುದ್ಧ ಪ್ರಕರಣ ದಾಖಲು

ಮಾಜಿ ಶಾಸಕ ಸಾವು ; ಆರೋಪಿ ಮುಜಾಹಿದಿಲ್ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ : ಆಟೋಗೆ ಕಾರು ಡಿಕ್ಕಿಯಾದ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ (68) ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.‌

ಶನಿವಾರ ಬೆಳಿಗ್ಗೆ ಖಡೇಬಜಾರ್, ಮಾರ್ಕೆಟ್‌ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿದೆ ಎಂದು ಹೇಳಿ ಆಟೋ ಚಾಲಕ ಬೆಳಗಾವಿಯ ಸುಭಾಷ ನಗರದ ನಿವಾಸಿ ಮುಜಾಹಿದಿಲ್ ಶಕೀಲ್ (28)

ಶ್ರೀನಿವಾಸ ಲಾಡ್ಜ್ ಬಳಿ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ‌ ನಡೆಸಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡು ವ್ಯಕ್ತಿ ಕುಸಿದು ಬಿದ್ದಿದ್ದು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವಣಪ್ಪಿದ್ದಾರೆ.

ಗೋವಾದ ಪೋಂಡಾ ವಿಧಾನಸಭಾ ಕ್ಷೇತ್ರದ 2012 ರಿಂದ 17 ರ ವರೆಗೆ ಕಾಂಗ್ರೆಸ್ ಶಾಸಕರಾಗಿದ್ದ ಲಾವೋ ಮಾಮಲೇದಾರ್ ಅವರು ನಗರದ ಶ್ರೀನಿವಾಸ ಲಾಡ್ಜ್ ನಲ್ಲಿ ತಂಗಿದ್ದರು. ವೈಯಕ್ತಿಕ ಕೆಲಸಕ್ಕೆ ಹೊರಗೆ ಹೋಗುದ್ದು ಲಾಡ್ಜ್ ಗೆ ಮರಳುವ ಸಂದರ್ಭದಲ್ಲಿ ಆಟೋಗೆ ಇವರಿದ್ದ ಕಾರು ಡಿಕ್ಕಿಯಾಗಿದೆ.

ನಂತರ ಲಾಡ್ಜ್ ಗೆ ಬಂದು ಕಾರು ಪಾರ್ಕ್ ಮಾಡಿ ಹೊರಬರುವ ವೇಳೆ ಆಟೋ ಚಾಲದ ಸುಭಾಷ ನಗರದ ನಿವಾಸಿ ಮುಜಾಹಿದಿಲ್ ಶಕೀಲ್ ಜಮಾದಾರ್ (28) ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಹಲ್ಲೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ಮಾಮಲೇದಾರ್ ಅವರನ್ನು ಕೂಡಲೇ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಜಿ‌ ಶಾಸಕ ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದ ಆರೋಪಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಜೊತೆ ಆಟೋವನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನೆ ಕುರಿತು ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ಹೊರಹಾಕಿದ್ದು ಮಾಜಿ ಶಾಸಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಸಾಮಾನ್ಯ ಜನರ ಪರಿಸ್ಥಿತಿ ಏನಾಗಬೇಡ. ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಅಡಿವೆಪ್ಪ ಕರಿಲಿಂಗನವರ ಎಂಬುವವರು ನೀಡಿದ ದೂರಿನ ಅನ್ವಯ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಲುವ ಉದ್ದೇಶದಿಂದಲೇ ಆರೋಪಿ ಮುಜಾಹಿದಿಲ್ ಶಕೀಲ್ ಬೆನ್ನಟ್ಟಿ ಲಾವೋ ಮಾಮಲೇದಾರ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!