Select Page

Advertisement

ಸವದತ್ತಿ ಜಾತ್ರೆಗೆ ಹೋದ ಮಗ ಕಾಣೆ : ಊಟ ಬಿಟ್ಟು ಮಗನಿಗಾಗಿ ಕಾಯುತ್ತಿರುವ ತಾಯಿ ಹೃದಯ…!

ಸವದತ್ತಿ ಜಾತ್ರೆಗೆ ಹೋದ ಮಗ ಕಾಣೆ : ಊಟ ಬಿಟ್ಟು ಮಗನಿಗಾಗಿ ಕಾಯುತ್ತಿರುವ ತಾಯಿ ಹೃದಯ…!



ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಹೋಗಿ ವಾಪಸ್ ಮನೆಗೆ ಬರದೆ ಮಗ ಕಾಣೆಯಾಗಿದ್ದು ಇತ್ತ ಹೆತ್ತ ಕರುಳು ಮಗನಿಗಾಗಿ ಊಟ ಬಿಟ್ಟು ನಿದ್ರೆ ಮಾಡದೆ ಕಾಯುತ್ತಿರುವ ಘಟನೆ ಮನಕಲಕುವಂತಿದೆ.

ಜಿಲ್ಲೆಯ ಗೋಕಾಕ್ ತಾಲೂಕಿನ ಲಘುಮೇಶ್ವರ ಗ್ರಾಮದ
ಲಕ್ಕಪ್ಪ ಭೀಮಪ್ಪ ಕೊಪ್ಪದ (40) ಕಾಣೆಯಾದ ವ್ಯಕ್ತಿ. ಈತನಿಗೆ ಮಾತನಾಡಲು ಬರುವುದಿಲ್ಲ. ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರೆಗೆ ಹೋಗಿದ್ದು ಈವರೆಗೂ ಮರಳಿ‌ ಮನೆಗೆ ಬಂದಿಲ್ಲ.

ಮಗ ಮನೆಗೆ ಬರದ ಹಿನ್ನಲೆಯಲ್ಲಿ ಕಳೆದ ಏಳೆಂಟು ದಿನಗಳಿಂದ ಆತನ ತಾಯಿ ಊಟ ಮಾಡದೆ ಮಗನಿಗಾಗಿ ಕಾಯುತ್ತಾ ಕೂತಿದ್ದಾಳೆ.‌ ಹೆತ್ತ ಕರಳು ಮಗನ ಬರುವಿಕೆಗಾಗಿ ದಿನ‌ ಕಳೆಯುತ್ತಿದೆ.

ಕಾಣೆಯಾದ ಲಕ್ಕಪ್ಪ ಭೀಮಪ್ಪ ಕೊಪ್ಪದನಿಗೆ ಮಾತನಾಡಲು ಬರುವುದಿಲ್ಲ. ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.‌ ಈತ ಪತ್ತೆಯಾದರೆ – 9844649927 ಸಂಖ್ಯೆಗೆ ಮಾಹಿತಿ ನೀಡಲು ಕುಟುಂಬದವರು ಮನವಿ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!