Select Page

Advertisement

ಘಟಪ್ರಭಾ ನದಿ ಪಾತ್ರದಲ್ಲಿ ದಿಢೀರ್ ಪ್ರವಾಹ ; ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರ ಆರೋಪ…!

ಘಟಪ್ರಭಾ ನದಿ ಪಾತ್ರದಲ್ಲಿ ದಿಢೀರ್ ಪ್ರವಾಹ ; ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರ ಆರೋಪ…!

ಬೆಳಗಾವಿ : ಹಿಡಕಲ್ ಜಲಾಶಯದಿಂದ ಹೆಚ್ಚಿನ ನೀರು ಏಕಕಾಲಕ್ಕೆ ಹೊರಬಿಟ್ಟ ಕಾರಣ ಘಟಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಲಕ್ಷಾಂತರ ರೂ‌‌. ಬೆಳೆ ಹಾನಿಗೆ ಅಧಿಕಾರಿಗಳೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ಪ್ರವಾಹ ಉಂಟಾಗುವ ರೀತಿಯಲ್ಲಿ ಮಳೆ ಆಗದಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಏಕಕಾಲಕ್ಕೆ ನೀರು ಹೊರಬಿಟ್ಟ ಹಿನ್ನಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ರೈತರ ವಾದವಾಗಿದೆ.

ಗೋಕಾಕ್ ಸೇರಿದಂತೆ ಘಟಪ್ರಭಾ ನದಿ ಪಾತ್ರದ ವಿವಿಧ ಗ್ರಾಮಗಳಿಗೆ ಪ್ರವಾಹ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬೆಳೆ ಹಾನಿಯ ಮೊತ್ತ ಸರಕಾರವೇ ಕೊಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!