Select Page

Advertisement

ಚಿನ್ನ ಗೆದ್ದ ಗೋಕಾಕ್ ಯುವತಿ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ; ಸಾಹುಕಾರ್ ಸನ್ಮಾನ

ಚಿನ್ನ ಗೆದ್ದ ಗೋಕಾಕ್ ಯುವತಿ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ; ಸಾಹುಕಾರ್ ಸನ್ಮಾನ

ಗೋಕಾಕ್ : ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಏಪ್ರಿಲ್ 25ರಿಂದ 27ರವರೆಗೆ ಜರಗಿದ 2ನೇ ಏಷ್ಯನ್ ಯೋಗಾಸನ ಕ್ರೀಡಾ ಚಾಂಪಿಯನ್‌ಷಿಪ್2025 ರಲ್ಲಿ ಕು.ನಿರ್ಮಲಾ ಸುಭಾಷ್ ಕೊಡ್ಲಿಕರ್ ತಮ್ಮ ಶಕ್ತಿಶಾಲಿ ಪ್ರದರ್ಶನದ ಮೂಲಕ ಮಹಿಳೆಯರ ಕೈ ಮೇಲೆ ನಿಂತು ಮಾಡುವ ಆಸನಗಳ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಈ ಚಾಂಪಿಯನ್‌ಷಿಪ್‌ನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್‌ಎಐ) ಹಾಗೂ ಏಷಿಯನ್ ಒಲಿಂಪಿಕ್ ಕೌನ್ಸಿಲ್ ಸಹಯೋಗದಲ್ಲಿ ಏಷ್ಯನ್ ಯೋಗಾಸನ ಸಂಸ್ಥೆಯು ಯೋಗಾಸನ ಭಾರತ ಸಂಸ್ಥೆ, ನವದೆಹಲಿಯ ಆತಿಥ್ಯದಲ್ಲಿ ನಡೆಸಲಾಗಿದ್ದು, ವಿಶ್ವ ಯೋಗಾಸನ ಸಂಸ್ಥೆ ಇದರ ಬಲಿಷ್ಠ ಬೆಂಬಲಕಾರ್ಯ ನಿರ್ವಹಿಸಿತು.

ಏಷ್ಯಾದ 20 ರಾಷ್ಟ್ರಗಳಿಂದ 200ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿಯ ನಡುವೆ ನಿರ್ಮಲಾ ಅವರು ತಮ್ಮ ನೈಪುಣ್ಯತೆಯಿಂದ ಗಮನ ಸೆಳೆದರು. ಸದರಿ ಸ್ಪರ್ಧೆಯಲ್ಲಿ ಉಜ್ಬೇಕಿಸ್ತಾನ್ ಬೆಳ್ಳಿ ಪದಕವನ್ನು ಹಾಗೂ ಮಲೇಶಿಯಾ ಕಂಚಿನ ಪದಕವನ್ನು ಜಯಿಸಿತು.

ನಿರ್ಮಲಾ ಅವರು ಮೂಲತಃ ಗೋಕಾಕ ತಾಲೂಕಿನ ಬಳೊಬಾಳ ಗ್ರಾಮದ ಯೋಗಪಟು, ದಶಕಗಳಿಂದ ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರ ಆಯೋಜಿಸುವ ರಾಜ್ಯ ರಾಷ್ಟ್ರೀಯ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ಸಾಹಭರಿತ ಪ್ರದರ್ಶನ ನೀಡುವುದರ ಜೊತೆಗೆ ಹಲವು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.

ಈ ಸಾಧನೆಯು ಭಾರತೀಯ ಯೋಗಾಸನ ಕ್ರೀಡೆಗೆ ಮಹತ್ತರ ಘಟ್ಟವನ್ನು ತಂದುಕೊಟ್ಟಿದೆ. ಭಾರತದ ಮಹಿಳಾ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುತ್ತಿರುವುದಕ್ಕೆ ನಿರ್ಮಲಾ ಅವರ ಯೋಗ ಪ್ರದರ್ಶನ ಮತ್ತೊಂದು ಸ್ಪಷ್ಟ ಉದಾಹರಣೆ ಎಂಬುದರಲ್ಲಿ ಸಂದೇಹವಿಲ್ಲ.

ಈ ಸಾಧನೆಗೆ ಡಾ. ಎಂ ನಿರಂಜನಮೂರ್ತಿ ಕಾರ್ಯದರ್ಶಿಗಳು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ, ಉಪಾಧ್ಯಕ್ಷರು ಏಷ್ಯನ್ ಯೋಗಾಸನ ಸಂಸ್ಥೆ ಇವರು ಪ್ರತಿ ಹಂತದಲ್ಲೂ ಮಾರ್ಗದರ್ಶಕರಾಗಿ ಹಾಗೂ ಹಿತೈಷಿಗಳಾಗಿ ಬೆಂಬಲಿಸಿದರು.

ಪೋಟೋ : ಏಷ್ಯನ್ ಯೋಗಾಸನ ಕ್ರೀಡಾ ಚಾಂಪಿಯನ್‌ಷಿಪ್ 2025 ರಲ್ಲಿ ಚಿನ್ನದ ಪದಕ ಪಡೆದ ನಿರ್ಮಲಾ ಸುಭಾಷ್ ಕೊಡ್ಲಿಕರ್ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನಿಸಿದರು.


Advertisement

Leave a reply

Your email address will not be published. Required fields are marked *

error: Content is protected !!