Select Page

Advertisement

ಗಂಗಾ ಜಲಕ್ಕಾಗಿ ಕಾಯುತ್ತಿದ್ದವರಿಗೆ ಅಪ್ಪಳಿಸಿ‌ದ ಸಾವಿನ ಸುದ್ದಿ ; ಕಣ್ಣೀರಾದ ಕುಟುಂಬ

ಗಂಗಾ ಜಲಕ್ಕಾಗಿ ಕಾಯುತ್ತಿದ್ದವರಿಗೆ ಅಪ್ಪಳಿಸಿ‌ದ ಸಾವಿನ ಸುದ್ದಿ ; ಕಣ್ಣೀರಾದ ಕುಟುಂಬ

ಗೋಕಾಕ್ : ಪ್ರಯಾಗರಾಜ್ ನ ಐತಿಹಾಸಿಕ ಕುಂಬಮೇಳಕ್ಕೆ ತೆರಳಿ ಪವಿತ್ರ ಸ್ನಾಮ ಮುಗಿಸಿ ಈ ತಂಡ ಮನೆಗೆಯವರಿಗೆ ಕರೆ ಮಾಡಿ ತಮ್ಮ ಬರುವಿಕೆಯ ವಿಷಯ ಮುಟ್ಟಿಸಿ ಗಂಗಾ ಜಲದೊಂದಿಗೆ ಮನೆಗೆ ಮರಳುತ್ತಿದ್ದರು. ಆದರೆ ಆಗಿದ್ದೇ ಬೇರೆ.

ಕಳೆದ ಒಂದು ವಾರದ ಹಿಂದಷ್ಟೇ ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ್ದ ಗೋಕಾಕ್ ನಗರದ 4 ಜನ ಸೇರಿ ಒಟ್ಡು 6 ಜನ ವಾಹನ ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಶಿವೊರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರಯಾಗರಾಜ್‌ದಿಂದ ತೂಫಾನ ಕ್ರೂಸರ್ ವಾಹನದಲ್ಲಿ ಜಬಲಪುರಗೆ ತೆರಳುವಾಗ ಬೆಳಿಗ್ಗೆ 6ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತರು ಲಕ್ಷ್ಮೀ ಬಡಾವಣೆ ನಿವಾಸಿ ಬಾಲಚಂದ್ರ ಗೌಡರ(50) ಉದ್ಯೋಗ ಫ್ಯಾಬ್ರಿಕಷನ್,

ಗುರುವಾರ ಪೇಟ ನಿವಾಸಿ ವಿರುಪಾಕ್ಷ ಗುಮತಿ(61) ಬಟ್ಟೆ ವ್ಯಾಪಾರ, ಗೊಂಬಿಗುಡಿ ಹತ್ತಿರದ ನಿವಾಸಿ ಬಸವರಾಜ್ ಕುರಟ್ಟಿ(63) ಬಟ್ಟೆ ವ್ಯಾಪಾರ, ಗುರುವಾರ ಪೇಟ ನಿವಾಸಿ ಬಸವರಾಜ್ ದೊಡಮನಿ(49) ಕೆಎಸ್‌ಆರ್‌ಟಿಸಿ ಡ್ರೈವರ್,

ಹುಕ್ಕೇರಿ ತಾಲೂಕಿನ ಆನಂದಪುರ ಗ್ರಾಮದ ನಿವಾಸಿ ಸುನೀಲ್ ಶೇಡಶ್ಯಾಳೆ(45) ಮೋಟರ್‌ವೈಕಲ್ ಶೋರೂಮ್ ಮಾಲಿಕ, ಬಾಗಲಕೋಟ ಜಿಲ್ಲೆ ಗುಳೇದಗುಡ್ಡದ ನಿವಾಸಿ ಈರಣ್ಣ ಶೇಬಿನಕಟ್ಟಿ(27), ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಮುಸ್ತಾಕ ಕಿಲ್ಲೇದಾರ, ಸದಾಶಿವ ಉಪದಲಿ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಟ್ಟು 8ಜನ ಸೇರಿ ಕಳೆದ ಮಂಗಳವಾರ ದಿ.18 ರಂದು ಪ್ರಯಾಗರಾಜನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ತೆರಳಿದ್ದರು. ರವಿವಾರದಂದು ತಮ್ಮ ತಮ್ಮ ಮನೆಗಳಿಗೆ ಫೋನ್ ಮುಖಾಂತರ ಮಾತನಾಡಿ ಸೋಮವಾರ ಕುಂಭಮೇಳದಲ್ಲಿ ತೀರ್ಥ ಸ್ನಾನ ಮಾಡಿ ಮರಳುವದಾಗಿ ತಿಳಿಸಿದ್ದಾರೆ. ಮುಸ್ತಾಕ ಕಿಲ್ಲೇದಾರ ಹೊರತುಪಡಿಸಿ ಮೃತ 6ಜನ ಗಾಯಾಳು ಸದಾಶಿವ ಉಪದಲಿ ಸೇರಿ ಎಲ್ಲರೂ ಸಂಬಂಧಿಕರಾಗಿದ್ದಾರೆ.

ಪ್ರಯಾಗರಾಜ ಕುಂಭಮೇಳಕ್ಕೆ ತೆರಳಿದ 6ಜನ ವಾಹನ ಅಪಘಾತದಲ್ಲಿ ಸಾವಿನಪ್ಪಿರುವ ಘಟನೆ ನಡೆದಿರುವುದು ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ರಮೇಶ ಜಾರಕಿಹೊಳಿ ಅವರು, ಮಧ್ಯಪ್ರದೇಶದ ಪೋಲಿಸ್ ಅಧಿಕಾರಿಗಳೊಂದಿಗೆ ದೂರವಾಣಿ

ಮುಖಾಂತರ ಮಾತನಾಡಿ, ಮೃತರ ಶವಪರೀಕ್ಷೆ ನಡೆಸಿ ಆದಷ್ಟು ಬೇಗ ಮೃತರ ಪಾರ್ಥಿವ ಶರೀರ ನಗರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿಕೋಡುವಂತೆ ಮನವಿ ಮಾಡಿದ್ದಾರೆ. ಮಂಗಳವಾರ ಸಂಜೆ ಮೃತರ ಪಾರ್ಥಿವ ಶರೀರ ನಗರಕ್ಕೆ ಆಗಮಿಸಲಿವೆ.

ಮೃತರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರುಗಳಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಅವರ ಕುಟುಂಬವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಪ್ರಾರ್ಥಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!