Select Page

Advertisement

ತುಂಡಾದ ವಿದ್ಯುತ್ ತಂತಿ ತಗುಲಿ ದಂಪತಿ ಸ್ಥಳದಲ್ಲೇ ಸಾವು

ತುಂಡಾದ ವಿದ್ಯುತ್ ತಂತಿ ತಗುಲಿ ದಂಪತಿ ಸ್ಥಳದಲ್ಲೇ ಸಾವು

ಬೆಳಗಾವಿ : ವಿದ್ಯುತ್ ತಂತಿ ತಗುಲಿ ದಂಪತಿ ಸ್ಥಳದಲ್ಲೇ ಸಾವಣಪ್ಪಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬಿಜಗರಣಿ ಗ್ರಾಮದ ರೈತ ದಂಪತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ನಿಸಾರ್ ಮೊಹಮ್ಮದ್ ಸನದಿ ( 32 ) ಹಾಗೂ ಲತಾ ಸನದಿ ( 26 ) ಮೃತ ವ್ಯಕ್ತಿಗಳು.

ಜಮೀನುಗಳಲ್ಲಿ ತುಂಬಾ ದಿನಗಳ ಹಿಂದೆ ವಿದ್ಯುತ್ ತಂತಿ ಅಳವಡಿಕೆ ಮಾಡಿದ್ದು ಅವು ಹಾಳಾದ ಸ್ಥಿತಿಯಲ್ಲಿದ್ದ ಕಾರಣ ಈ ಅವಘಡ ಸಂಭವಿಸಿದೆ. ಹೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!