ಫೆ.6ಕ್ಕೆ ‘ ಕರಿಕಾಡ ‘ ರಿಲೀಸ್

ಗಿಲ್ಲಿ ವೆಂಕಟೇಶ್ ನಿರ್ದೇಶನದ ಕರಿಕಾಡ ಚಿತ್ರ ಫೆಬ್ರವರಿ 6ರಂದು ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.
ವಿಭಿನ್ನ ಶೀರ್ಷಿಕೆಯ ಕರಿಕಾಡ ಚಿತ್ರ ಕನ್ನಡ ಅಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕರ್ನಾಟಕದಲ್ಲಿ ಒಟ್ಟು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಚಿತ್ರದ ಟೀಸರ್ ಇದೊಂದು ಅಡ್ವೆಂಚರಸ್ ಹಾಗೂ ಹಳ್ಳಿ ಸೊಗಡಿನ ಸಿನಿಮಾ ಎನ್ನುವುದನ್ನು ಹೇಳುತ್ತದೆ. ಕಾಡಿನಲ್ಲಿ ನಡೆಯುವ ಕಥೆಯಲ್ಲಿ ದ್ವೇಷ, ಪ್ರೀತಿ, ಪ್ರತೀಕಾರ ಈ ರೀತಿಯ ನಾನಾ ಭಾವನೆಗಳಿವೆ.
ಚಿತ್ರದಲ್ಲಿ ನಟರಾಜ್ ನಾಯಕನಾಗಿ ಹಾಗೂ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರತುನಿ ರತುನಿ .., ಕಬ್ಬಿನ ಜಲ್ಲೆ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಅತಿಶಯ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದ ಮೂರನೇ ಹಾಡು ‘ನೀ ಯಾರೇ ನನಗೆ’ ಜನವರಿ 28ರಂದು ಬಿಡುಗಡೆ ಆಗಲಿದೆ.
ಚಿತ್ರದ ನಿರ್ದೇಶಕ ಗಿಲ್ಲಿ ವೆಂಕಟೇಶ್ ಅವರು ಚಿಕ್ಕಮಗಳೂರಿನ ಸರಪನಹಳ್ಳಿಯವರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ಸಿನಿಮಾದ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಹೊಂದಿದ್ದಾರೆ. ಈಗ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ ಎದುರಿಸುತ್ತಿದ್ದಾರೆ.
ಚಿತ್ರವನ್ನು ರಿದ್ಧಿ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ದೀಪ್ತಿ ದಾಮೋದರ್ ಅವರು ನಿರ್ಮಿಸುತ್ತಿದ್ದಾರೆ. ಹೊಸ ಪ್ರತಿಭೆಗಳಿಂದ ಕೂಡಿರುವ ಚಿತ್ರ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಚಿತ್ರದಲ್ಲಿ ಒಟ್ಟು ನಾಲ್ಕು ಜನ ನಾಯಕಿಯರು ಇದ್ದಾರೆ. ನಾಯಕಿಯರ ಹೆಸರನ್ನು ಸಸ್ಪೆನ್ಸ್ ಇಡಲಾಗಿದೆ. ಚಿತ್ರದಲ್ಲಿ ಒಟ್ಟು ಏಳು ಸಾಂಗ್ ಗಳು ಹಾಗೂ ಆರು ಫೈಟ್ ಗಳಿವೆ ಎಂದು ನಿರ್ದೇಶಕರು ಬಿ ಸಿನಿಮಾಸ್ ಗೆ ಹೇಳಿದ್ದಾರೆ.
__

