ಅತ್ಯಾಚಾರಿಗಳಿಗೆ ಸಿಂಹಸ್ವಪ್ನರಾದ ಡಾ. ಸೋನಾಲಿ ; ಫೋಕ್ಸೋ ಪ್ರಕರಣದಡಿ ಆರೋಪಿಗಳಿಗೆ ಶಿಕ್ಷೆ..!

ಬೆಳಗಾವಿ : ಅತ್ಯಾಚಾರ ಆರೋಪಿಗಳಿಗೆ ಸಿಂಹಸ್ವಪ್ನವಾಗುವ ಮೂಲಕ ಡಾ. ಸೋನಾಲಿ ಸರ್ನೋಬತ್ ಗಮನಸೆಳೆದಿದ್ದಾರೆ. ನೊಂದ ಹೆಣ್ಣುಮಗುವಿನ ಪರವಾಗಿ ಗಟ್ಟಿ ಧ್ವನಿ ಎತ್ತುವ ಮೂಲಕ ಮಹಿಳೆಯರ ಪರವಾಗಿ ನಿಂತ ಇವರ ಕಾರ್ಯಕ್ಕೆ ಸಧ್ಯ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ
ಹಿಂದೆ ಪೊಲೀಸ್ ಅಧಿಕಾರಿ ಪುತ್ರ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನದ ಕುರಿತು ಬಿಜೆಪಿ ರಾಜ್ಯ ಘಟಕದ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಧ್ವನಿ ಎತ್ತಿದ್ದರು. ಅಷ್ಟೇ ಅಲ್ಲದೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಸಧ್ಯ ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ನೀಡಿರುವ ಕ್ರಮಕ್ಕೆ ಡಾ. ಸೋನಾಲಿ ಸಂತಸ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಮೊದಲಿನಿಂದಲೂ ಧ್ವನಿ ಎತ್ತಲಾಗಿತ್ತು. ಆನಂತರ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತು. ನ್ಯಾಯಾಂಗ ವ್ಯವಸ್ಥೆಯ ತ್ವರಿತ ಕ್ರಮಗಳು ಹಾಗೂ ಫಾಸ್ಟ್‌ಟ್ರ್ಯಾಕ್ ವಿಚಾರಣೆಯ ಮೂಲಕ ಆರೋಪಿಗಳು ದೋಷಾರೋಪಿತರಾಗಿ ಶಿಕ್ಷೆಗೆ ಗುರಿಯಾಗಿರುವುದು ನ್ಯಾಯದ ಗೆಲುವಾಗಿದೆ.
ಈ ಘಟನೆ ಯುವಜನತೆಗೆ ಪಾಠವಾಗಬೇಕು. ಕಾನೂನು ಎಲ್ಲರಿಗೂ ಸಮಾನ, ಮಹಿಳೆಯರು ಮತ್ತು ಮಕ್ಕಳ ಗೌರವ ಅಚಲ. ಸಮಾಜದಲ್ಲಿ ಸರಿಯಾದ ನಡವಳಿಕೆ, ಸಂಯಮ ಮತ್ತು ಕಾನೂನಿನ ಗೌರವ ಅತ್ಯವಶ್ಯ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.
**************
ಆರೋಪಿಗಳಿಗೆ ಶಿಕ್ಷೆ : ಬೆಳಗಾವಿ ಕಳೆದಂತೆ ವರ್ಷದ ಮೇ ನಲ್ಲಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನಿಬ್ಬರಿಗೆ 20 ವರ್ಷ ಕಾರಾಗೃಹ ಕಠಿಣ ಶಿಕ್ಷೆಯನ್ನು ಬೆಳಗಾವಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಪ್ರಕಟಿಸಿದೆ.
ಬಾಲಕಿಯೊಬ್ಬಳನ್ನು ಬೆಳಗಾವಿ ನಗರದಿಂದ ಪುಸಲಾಯಿಸಿ, ನಗರ ಹೊರವಲಯದ ಫಾರ್ಮಹೌಸವೊಂದರಲ್ಲಿ ಗ್ಯಾಂಗ್ ರೇಪ್ ನಡೆಸಲಾದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಮಗ ಸೇರಿ ನಾಲ್ವರು ಅತ್ಯಾಚಾರ ನಡೆಸಿದ್ದರು. ಇದರಲ್ಲಿ ಫಾರ್ಮಹೌಸ್ ಮಾಲೀಕರು ಇಬ್ಬರಿದ್ದಾರೆ. ಅವರಿಗೆ ಶಿಕ್ಷೆ ಪ್ರಕಟಿಸುವುದು ಬಾಕಿ ಇದೆ.
ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಒಟ್ಟು 6ಜನರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದರು. ಬಾಲಕಿಯನ್ನು ಮೂರು ಜನ ಅಪಹರಿಸಿಕೊಂಡು ಹೋಗಿ ಈ ಕುಕೃತ್ಯ ನಡೆಸಿದ್ದರು. ಪ್ರಕರಣದಲ್ಲಿ ಫಾರ್ಮ್ ಹೌಸ್ ಮಾಲೀಕ ಸೇರಿ ಬಂಧಿಸಲಾದ ಓಟ್ಟು 6 ಜನರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದರು. ನಾಲ್ಕು ಜನರ ವಿರುದ್ದ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಮಾರ್ಕೇಟ್ ಠಾಣೆ ಅಂದಿನ ಇನ್ಸಪೆಕ್ಟರ್ ಧಾಮಣ್ಣವರ ತನಿಖೆ ನಡೆಸಿ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪೊಲೀಸ್ ಇನ್ಸಪೆಕ್ಟರ್ ಒಬ್ಬರ ಪುತ್ರ ಸಹ ಈ ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿರುವುದು ದುರಂತದ ಸಂಗತಿ.

