Select Page

Advertisement

ದೇಶಭಕ್ತಿ ಚಿಂತನೆ ಸಮೃದ್ಧ ಬದುಕಿಗೆ ದಾರಿ – ಡಾ. ಸೋನಾಲಿ

ದೇಶಭಕ್ತಿ ಚಿಂತನೆ ಸಮೃದ್ಧ ಬದುಕಿಗೆ ದಾರಿ – ಡಾ. ಸೋನಾಲಿ

ಬೆಳಗಾವಿ : ಸೃಜನಶೀಲ ಬದುಕಿಗೆ ದೇಶಭಕ್ತಿ ಚಿಂತನೆ ಅತ್ಯವಶ್ಯಕ. ಧರ್ಮದ ಹಾದಿಯಲ್ಲಿ ಸಾಗುವ ಪ್ರತಿಯೊಬ್ಬರ ಬದುಕು ಅತ್ಯಂತ ಸಂತೃಪ್ತಿಯಿಂದ ಕೂಡಿರುತ್ತದೆ ಎಂದು ಜಿಜಾವು ಬ್ರಿಗೇಡ್ ಅಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಅಭಿಪ್ರಾಯಪಟ್ಟರು.

ನಗರದ ಉದಯ ಭವನದಲ್ಲಿ ಬುಧವಾರ ನಡೆದ ಜಿಜಾವು ಬ್ರಿಗೇಡ್ ನ ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಹಿಂದೂ ಬಾಲ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದ ಇವರು. 1 ರಿಂದ 10 ನೇ ತರಗತಿ ವರೆಗಿನ ಬಾಲಕ & ಬಾಲಕಿಯರಿಗಾಗಿ ಆಯೋಜಿಸಿರುವ ಒಂದು ದಿನದ ತರಬೇತಿ ಶಿಬಿರದಲ್ಲಿ ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕೃತಿ ಹಾಗೂ ದೇಶಭಕ್ತಿಯ ವಿಚಾರ ತಿಳಿಸುವ ಉಪಯುಕ್ತ ಕಾರ್ಯಕ್ರಮ ‌ಇದಾಗಿದ್ದು ಪ್ರತಿಯೊಬ್ಬರಿಗೂ ಸಹಕಾರಿ ಆಗಲಿದೆ ಎಂದರು.

ಶಿಬಿರದಲ್ಲಿ ಕಿಶೋರ್ ಕಾಕಡೆ, ನಿಯಾಮಿ‌ ಪಾಟೀಲ್, ಸುನಿತಾ ಪಾಟನಕರ್ ಸೇರಿದಂತೆ ಜಿಜಾವು ಬ್ರಿಗೇಡ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!