ಐಪಿಎಸ್ ಡಾ. ಸಂಜೀವ ಪಾಟೀಲ್ ಅವರಿಗೆ ರಾಷ್ಟ್ರಪತಿ ಪದಕ
ಬೆಳಗಾವಿ : ಪೊಲೀಸ್ ಪ್ರಧಾನ ಕೇಂದ್ರ ಕಚೇರಿಯಲ್ಲಿ ಸಧ್ಯ ಎಐಜಿಪಿ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ. ಸಂಜೀವ್ ಪಾಟೀಲ್ ಅವರಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಈ ಹಿಂದೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಂಜೀವ್ ಪಾಟೀಲ್ ಅವರು ಜನಸ್ನೇಹಿ ಪೊಲೀಸ್ ವ್ಯವಸ್ಥೆ ತರುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ ಎಸ್ಪಿ ಫೋನ್ ಇನ್ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಜನರ ನೋವು ಆಲಿಸುವ ವಿನೂತನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ಡಾ. ಸಂಜೀವ್ ಪಾಟೀಲ್ ಅವರ ಶ್ಲಾಘನೀಯ ಕಾರ್ಯಕ್ಕೆ ರಾಷ್ಟ್ರಪತಿ ಪದಕ ಲಭಿಸಿದೆ. ಈ ಬಾರಿ ರಾಜ್ಯದಲ್ಲಿ ಒಟ್ಟು 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಲಭಿಸಿದ್ದು, ಇಬ್ಬರಿಗೆ ವಿಶಿಷ್ಟ ಸೇವಾ ಪದಕ ಹಾಗೂ ಇನ್ನುಳಿದ ಅಧಿಕಾರಿಗಳಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ವಿಶಿಷ್ಟ ಸೇವಾ ಪದಕ ವಿಜೇತರು : ಬಸವರಾಜ ಶರಣಪ್ಪ ಜಿಳ್ಳೆ – ಡಿಐಜಿಪಿ, ಕೆಎಸ್ಆರ್ಪಿ ಬೆಂಗಳೂರು, ಕಮಾಂಡೆಂಟ್, 12ನೇ ಪಡೆ, ಕೆಎಸ್ಆರ್ಪಿ ತುಮಕೂರು.
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು : ರೇಣುಕಾ ಕೆ ಸುಕುಮಾರ್ – ಡಿಐಜಿಪಿ, ಡಿಸಿಆರ್ಇ, ಬೆಂಗಳೂರು. ಡಾ.ಸಂಜೀವ್ ಎಂ ಪಾಟೀಲ್ – ಐಪಿಎಸ್ – ಎಐಜಿಪಿ ಜನರಲ್, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು. ನಗರಬಿ.ಎಂ.ಪ್ರಸಾದ್ – ಕಮಾಂಡೆಂಟ್, ಐಆರ್ಬಿ, ಮುನಿರಾಬಾದ್,
ಕೊಪ್ಪಳವೀರೇಂದ್ರ ನಾಯಕ್ ಎನ್ – ಡೆಪ್ಯುಟಿ ಕಮಾಂಡೆಂಟ್, 11ನೇ ಪಡೆ, ಕೆಎಸ್ಆರ್ಪಿ ಹಾಸನ. ಗೋಪಾಲ್ ಡಿ ಜೋಗಿನ – ಎಸಿಪಿ, ಸಿಸಿಬಿ ಬೆಂಗಳೂರು. ಗೋಪಾಲಕೃಷ್ಣ ಬಿ ಗೌಡರ್ – ಡಿವೈಎಸ್ಪಿ, ಚಿಕ್ಕೋಡಿ ಉಪವಿಭಾಗ, ಬೆಳಗಾವಿ. ಹೆಚ್.ಗುರುಬಸವರಾಜ – ಪೊಲೀಸ್ ಇನ್ಸ್ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ.
ಜಯರಾಜ್ ಹೆಚ್ – ಪೊಲೀಸ್ ಇನ್ಸ್ಪೆಕ್ಟರ್, ಗೋವಿಂದಪುರ ಠಾಣೆ, ಬೆಂಗಳೂರುಪ್ರದೀಪ್ ಬಿ.ಆರ್ – ಸರ್ಕಲ್ ಇನ್ಸ್ಪೆಕ್ಟರ್, ಹೊಳೆನರಸೀಪುರ ವೃತ್ತ ಠಾಣೆ, ಹಾಸನ. ಮೊಹಮ್ಮದ್ ಮುಕಾರಾಂ – ಪೊಲೀಸ್ ಇನ್ಸ್ಪೆಕ್ಟರ್, ಸಿಸಿಬಿ ಬೆಂಗಳೂರು. ವಸಂತ ಕುಮಾರ್ ಎಂ.ಎ – ಪೊಲೀಸ್ ಇನ್ಸ್ಪೆಕ್ಟರ್, ಬ್ಯೂರೋ ಆಫ್ ಇಮಿಗ್ರೇಷನ್. ಮಂಜುನಾಥ್ ವಿ.ಜಿ – ಎಎಸ್ಐ, ಸಿಐಡಿ ಬೆಂಗಳೂರು. ಅಲ್ತಾಫ್ ಹುಸೇನ್ ಎನ್ ದಖನಿ – ಎಎಸ್ಐ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು.
ಬಲೇಂದ್ರನ್ – ಆರ್ಹೆಚ್ಸಿ, 4ನೇ ಪಡೆ, ಕೆಎಸ್ಆರ್ಪಿ ಬೆಂಗಳೂರು. ಅರುಣ ಕುಮಾರ್ – ಸಿಹೆಚ್ಸಿ, ಡಿಐಜಿಪಿ ಕಚೇರಿ, ಈಶಾನ್ಯ ವಲಯ, ಕಲಬುರಗಿ. ನಯಾಜ್ ಅಂಜುಮ್ – ಎಹೆಚ್ಸಿ, ಡಿಪಿಓ ಚಿಕ್ಕಮಗಳೂರು. ಶ್ರೀನಿವಾಸ್ ಎಂ – ಸಿಹೆಚ್ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು. ಅಶ್ರಫ್ ಪಿ.ಎಂ – ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು. ಶಿವಾನಂದ ಬಿ – ಸಿಹೆಚ್ಸಿ, ಕುಂದಾಪುರ ಪೊಲೀಸ್ ಠಾಣೆ, ಉಡುಪಿ
ಎಲ್ಲ ರಾಜ್ಯಗಳ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ಇತರೆ ಸೇವೆಗಳ ಒಟ್ಟು 942 ಸಿಬ್ಬಂದಿಯು 2025 ರ ಗಣರಾಜ್ಯೋತ್ಸವದ ಅಂಗವಾಗಿ ಕೊಡುವ ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ


