ಧಾರವಾಡ : ಧಾರವಾಡದಲ್ಲಿ (Dharwad) ಮರಳಿನ ಲಾರಿ ಸಂಚಾರಕ್ಕೆ ಅನುಮತಿ ನೀಡಲು ಲಂಚ (Bribe) ಪಡೆಯುತ್ತಿದ್ದಾಗ ಮೂರು ಹೆಡ್ ಕಾನ್ಸ್ಟೇಬಲ್ಗಳು ಮತ್ತು ಒಬ್ಬ ಹೋಮ್ ಗಾರ್ಡ್ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಲ್ಲಿ ಮರಳು ಸಾಗಿಸುವ ಟಿಪ್ಪರ್ ಲಾರಿಯನ್ನು ಯಾರುದೇ ಅಡೆತಡೆಯಿಲ್ಲದೆ ಓಡಿಸಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಟಿಪ್ಪರ್ ಚಾಲಕ ಹನುಮಂತ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ಹೆಡ್ ಕಾನ್ಸ್ಟೇಬಲ್ ಗಳಾದ ಹಸನಸಾಬ್ ನದಾಫ್, ಇಮಾಮ ಅಕ್ತರ್, ಗಿರೀಶ್ ಮನ್ಸೂರ್ ಹಾಗೂ ಹೋಂ ಗಾರ್ಡ್ ಇಕ್ಬಾಲ್ ನದಾಫ್ ಎಲ್ಲರೂ 30 ಸಾವಿರ ರೂ. ಹಣಕ್ಕೆ ಭೇಡಿಕೆ ಇಟ್ಟ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


