ದೃಶ್ಯ ಸಿನೆಮಾದಂತಾದ ತಲೆಬುರುಡೆ ಪ್ರಕರಣ ; ಪೊಲೀಸ್ ಠಾಣೆ ಮುಂದೆ ಸ್ಪಾಟ್ ತೋರಿಸಿದ ಅನಾಮಿಕ
ಧರ್ಮಸ್ಥಳ : ಧರ್ಮಸ್ಥಳ ತಲೆಬುರುಡೆ ಹುಡುಕುವ ಪ್ರಕರಣ ಸಧ್ಯ ಸಿನೆಮಾ ಮೂಡ್ ಗೆ ಬಂದಂತೆ ಕಾಣಿಸುತ್ತಿದೆ. ಬರುಬರುತ್ತ ಅನಾಮಿಕ ವ್ಯಕ್ತಿ ಅಗೆಯಲು ತೋರಿಸುತ್ತಿರುವ ಜಾಗ ವಿಚಿತ್ರವಾಗಿವೆ.
ಹೌದು ದೃಶ್ಯ – ಸಿನೆಮಾದ ಕಥೆಯಂತೆ ಸಧ್ಯ ಮುಸುಕುಧಾರಿ ವ್ಯಕ್ತಿ ಧರ್ಮಸ್ಥಳ ಪೊಲೀಸ್ ಠಾಣೆ ಹಿಂದಿನ ಖಾಲಿ ಜಾಗ ತೋರಿಸಿ ಇಲ್ಲೇ ಶವ ಹೂತಿದ್ದೇನೆ ಎಂದು ಪೊಲೀಸರಿಗೆ ಹೇಳುತ್ತಿದ್ದಾನೆ. ಎಸ್ಐಟಿ ಅಧಿಕಾರಿಗಳೂ ಈತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. .
ಸರಕಾರಿ ಬಸ್ ನಿಲ್ದಾಣಕ್ಕೂ ಮೊದಲಿರುವ ಪೊಲೀಸ್ ಠಾಣೆಯ ಹಿಂಭಾಗದ ಜಾಗದಲ್ಲಿ ಅಗೆಯುವಂತೆ ಅನಾಮಿಕ ಹೇಳುತ್ತಿದ್ದಾನೆ. ಈ ಜಾಗದಲ್ಲಿ ಖಂಡಿತವಾಗಿಯೂ ಸಿಗುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿದೆ.
ಆದರೆ ಎಸ್ಐಟಿ ತಂಡ ಅನಾಮಿಕ ತೋರಿಸಿದ ಜಾಗ ಅಗೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಅಧಿವೇಶನ ನಡೆಯುತ್ತಿರುವ ಈ ವೇಳೆ ವಿಪಕ್ಷಗಳಿಗೆ ಆಹಾರವಾಗುವ ಸಾಧ್ಯತೆ ಇದ್ದು. ಕೂಡಲೇ ಅಗೆಯುವ ಕೆಲಸಕ್ಕೆ ಮುಕ್ತಿ ನೀಡುವ ಸಾಧ್ಯತೆ ದಟ್ಟವಾಗಿದೆ.


