BREAKING NEWS : ಧರ್ಮಸ್ಥಳ ತಲೆಬುರುಡೆ ಕೇಸ್ ; ಅನಾಮಿಕ ವ್ಯಕ್ತಿ ಕೊಟ್ಟ ಸುಳಿವು ಏನು…?
ಧರ್ಮಸ್ಥಳ : ತೀವ್ರ ಕುತೂಹಲ ಮೂಡಿಸಿದ್ದ ಧರ್ಮಸ್ಥಳ ( Dharmastala ) ತಲೆ ಬುರುಡೆ ( Mass Burial ) ಪ್ರಕರಣ ತನಿಖೆ ಚುರುಕುಗೊಂಡಿದ್ದು ಇಂದು ತಲೆಬುರುಡೆ ರಹಸ್ಯ ಹೇಳುತ್ತೇನೆ ಎಂದಿದ್ದ ಅನಾಮಿಕ ವ್ಯಕ್ತಿಯನ್ನು ಧರ್ಮಸ್ಥಳಕ್ಕೆ ಕರೆತಂದು ಸ್ಥಳ ಮಹಜರು ಮಾಡಲಾಗಿದೆ.
ಪ್ರಕರಣ ಕುರಿತು ತನಿಖೆ ನಡೆಸಿದ್ದ ಎಸ್ಐಟಿ ತಂಡ ತನಿಖೆಯ ಮೂರನೇ ದಿನವಾದ ಸೋಮವಾರ ಧರ್ಮಸ್ಥಳಕ್ಕೆ ಎಂಟ್ರಿ ಕೊಟ್ಟಿತ್ತು. ಅನಾಮಿಕ ವ್ಯಕ್ತಿ ಜೊತೆ ಆಗಮಿಸಿ ಮೊದಲು ಧರ್ಮಸ್ಥಳದ ನೇತ್ರಾವತಿ ಸ್ನಾನಗೃಹದ ಬಳಿ ಕರೆತರಲಾಯಿತು.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಅನಾಮಿಕ ವ್ಯಕ್ತಿಯನ್ನು ಒಂದು ಗಂಟೆ ವಿಚಾರಣೆ ನಡೆಸಿದರು. ನಂತರ ಎಫ್ಎಸ್ಎಲ್ FSL ತಂಡ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಭೂ ದಾಖಲೆ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಗಳನ್ನು ಪರಿಶೀಲನೆಗಾಗಿ ತೋರಿಸಿದರು.
ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲಿ ಎಸ್ಐಟಿ SIT ಅಧಿಕಾರಿಗಳು ಹಾಗೂ FSL ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಆ ಜಾಗದಲ್ಲಿ ಯಾವುದಾದರೂ ಕಳೆಬರ ಸಿಗುತ್ತಾ ಎಂದು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಅನಾಮಿಕ ವ್ಯಕ್ತಿ 13 ಸ್ಥಳದಲ್ಲಿ ಮೃತದೇಹ ಹೂತಿಟ್ಟಿರುವುದಾಗಿ ಹೇಳಿದ್ದು, ಆ ಜಾಗಗಳನ್ನು ಗುರುತು ಮಾಡಲಾಗಿದೆ. ಇನ್ನೂ ಅಧಿಕಾರಿಗಳು ಆ ಸ್ಥಳದಲ್ಲಿ ಹುಡುಕಾಟ ನಡೆಸಲಿದ್ದಾರೆ.


