ಬೆಳಗಾವಿ : ಮಹಾರಾಷ್ಟ್ರ ಪಶ್ಚಿಮಘಟ್ಟ ‌ಪ್ರದೇಶದಲ್ಲಿ‌ ಮಳೆ ಇಬ್ಬರ ಮುಂದುವರಿದ ಪರಿಣಾಮ ಕೃಷ್ಣಾ ಹಾಗೂ ದೂದಗಂಗಾ ನದಿ‌‌ ನೀರಿ‌ನ ಮಟ್ಟ ಏರಿಕೆಯಾಗಿದೆ.

ಸೋಮವಾರ ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ 90 ಸಾವಿರ ಕ್ಯೂಸೆಕ್ ತಲುಪಿದ್ದು ಚಿಕ್ಕೋಡಿ ಉಪವಿಭಾಗದ 16 ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಂಟು ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ.

ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು – ಕಲ್ಲೋಳ, ಭಾವನಸೌಂದತ್ತಿ – ಮಾಂಜರಿ, ದೂದಗಂಗಾ ನದಿಯ ಮಲ್ಲಿಕವಾಡ – ದತ್ತವಾಡ, ಕಾರದಗಾ – ಭೋಜ, ಭೋಜವಾಡಿ – ಕಾರದಗಾ, ಎಕ್ಸಂಬಾ – ದತ್ತವಾಡ, ಭಾರವಾಡ – ಕುನ್ನೂರು, ಬೋಜವಾಡಿ – ಕುನ್ನೂರು ಸೇತುವೆ ಜಲಾವೃತಗೊಂಡಿವೆ.