Select Page

Advertisement

ಡಿಸಿಸಿ ಚುನಾವಣೆ : 6 ಕ್ಷೇತ್ರ 586 ಮತ, ಈ ಕೆಲಸ‌ ಮಾಡಿದ್ರೆ ಕಸದ ಬುಟ್ಟಿಗೆ Vote…!

ಡಿಸಿಸಿ ಚುನಾವಣೆ : 6 ಕ್ಷೇತ್ರ 586 ಮತ, ಈ ಕೆಲಸ‌ ಮಾಡಿದ್ರೆ ಕಸದ ಬುಟ್ಟಿಗೆ Vote…!

ಬೆಳಗಾವಿ : ನಾಳೆ ಭಾನುವಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಆರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಚುನಾವಣೆ ಹಿನ್ನಲೆಯಲ್ಲಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಏಳು ಕ್ಷೇತ್ರಗಳಿಗೆ ನಡೆಯಬೇಕಿದ್ದ ಚುನಾವಣೆ ಸಧ್ಯ 6 ಕ್ಷೇತ್ರಕ್ಕೆ ‌ಮಾತ್ರ ನಡೆಯಲಿದೆ. ಅಥಣಿ, ರಾಯಬಾಗ, ನಿಪ್ಪಾಣಿ, ಬೈಲಹೊಂಗಲ, ರಾಮದುರ್ಗ ಹಾಗೂ ಕಿತ್ತೂರು ಕ್ಷೇತ್ರದ ಚುನಾವಣೆ ನಡೆಯಲಿದೆ. ಇನ್ನೂ ಹುಕ್ಕೇರಿ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ.

ಒಟ್ಟು 6 ಕ್ಷೇತ್ರದಿಂದ 586 ಜನ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಳಗಾವಿ ಕ್ಯಾಂಪ್ ಪ್ರದೇಶದ ಬಿ.ಕೆ ಮಾಡೇಲ್ ಪ್ರೌಢ ಶಾಲೆಯಲ್ಲಿ ಭಾನುವಾರ ಅ. 19 ರಂದು ಬೆಳಿಗ್ಗೆ – 09 ರಿಂದ ಸಂಜೆ 04 ಗಂಟೆಯವರೆಗೆ ಮತದಾನ ನಡೆಯಲಿದೆ.

ಭಾನುವಾರ ಸಂಜೆ ನಾಲ್ಕು ಗಂಟೆ ನಂತರ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇನ್ನೂ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ‌.

ಗುಪ್ತ ಮತದಾನ ನಡೆಯಲಿದ್ದು ಯಾವುದೇ ಕಾರಣಕ್ಕೂ ಮತದಾರ ತನ್ನ ಮತವನ್ನು ಯಾರಿಗೂ ತೋರಿಸುವಂತಿಲ್ಲ. ಒಂದು ವೇಳೆ ಯಾರಿಗಾದರೂ ಗಮ್ಮ ಮತ ತೋರಿಸಿದ್ದೇ ಆದರೆ ಅಂತಹ ಮತವನ್ನು ಅನರ್ಹಗೊಳಿಸಲಾಗುತ್ತದೆ ಎಂದು ಚುನಾವಣಾ ಅಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!