ಬೆಳಗಾವಿ ಹಿಂಡಲಗಾ ಜೈಲಿಗೆ ನಟ ದರ್ಶನ್ ಶಿಪ್ಟ್…?
ಬೆಳಗಾವಿ : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದರಾ ಎಂಬ ಮಾತು ಕೇಳಿಬರುತ್ತಿವೆ.
ಸಧ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ತನ್ನ ವರ್ಚಸ್ಸು ಬಳಸಿಕೊಂಡು ಸುಖವಾಗಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಬೆಳಗಾವಿ ಹಿಂಡಲಗಾ ಜೈಲಿಗೆ ನಟ ದರ್ಶನ್ ಸ್ಥಳಾಂತರ ಕುರಿತು ಚಿಂತನೆ ನಡೆದಿದೆ.
ಅತ್ಯಂತ ಹಳೆಯ ಕಾರಾಗೃಹವಾಗಿರುವ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ್ಲಲ್ಲಿ ಸಧ್ಯ ಕುಖ್ಯಾತ ರೌಡಿಗಳು ಇದ್ದಾರೆ. ಈ ಹಿನ್ನಲೆಯಲ್ಲಿ ನಟ ದರ್ಶನ್ ನನ್ನು ಬೆಂಗಳೂರಿನಿಂದ ಬೆಳಗಾವಿಗೆ ಶಿಪ್ಟ್ ಮಾಡಿದರೆ ಎಲ್ಲವೂ ಸರಿ ಹೋಗಬಹುದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು.
ಜೈಲಿನಲ್ಲಿ ದರ್ಶನ್ ಬಿಂದಾಸ್ ಜೀವನ : ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರನಟ ದರ್ಶನ್ ನದ್ದೆ ಎನ್ನಲಾದ ಪೋಟೋ ವೈರಲ್ ಆಗಿದ್ದು, ಕೈಯಲ್ಲಿ ಚಹಾ ಜೊತೆಗೆ ಸಿಗರೇಟು ಹಿಡಿದು ಕುಳಿತಿರುವ ಪೋಟೋ ವೈರಲ್ ಆಗಿದ್ದು, ಜೈಲು ಅಧಿಕಾರಿಗಳ ಮೇಲೆ ಅನುಮಾನ ಮೂಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಮನೆ ಊಟ ಕೊಡಲು ಸಾಧ್ಯವಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಹೇಳಿದ್ದರು.
ಆದರೆ ಇದೀಗ ದರ್ಶನ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಿರುವ ಫೋಟೊ ವೈರಲ್ ಆಗಿದ್ದು, ಪರಪ್ಪನ ಅಗ್ರಹಾರದಲ್ಲಿ ಕೂಡ ದರ್ಶನ್‌ಗೆ ರಾಜಾಥಿತ್ಯ ಸಿಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
65 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ, ಮನೆ ಊಟ ಇಲ್ಲದೆ ತೂಕ ಕಳೆದುಕೊಂಡಿದ್ದಾರೆ. ಧ್ಯಾನ ಮಾಡುತ್ತಿದ್ದಾರೆ, ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು, ಆದರೆ
ಇದೀಗ ವೈರಲ್ ಆಗಿರುವ ಫೋಟೊ ನೋಡಿದರೆ ಎಲ್ಲವೂ ಸುಳ್ಳು ಎನ್ನುವ ಅನುಮಾನ ಮೂಡುತ್ತಿದೆ. ದರ್ಶನ್ ಜೈಲಿನಲ್ಲಿ ಕೂಡ ಆರಾಮಾಗಿ ಕಾಲ ಕಳೆಯುತ್ತಿದ್ದು, ಸಿಗರೇಟು ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೊ ಅದಕ್ಕೆ ಸಾಕ್ಷಿಯಾಗಿದೆ.
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಸಿಗರೇಟು ಸೇದುತ್ತಾ ಹರಟೆ ಹೊಡೆಯುತ್ತಿದ್ದಾರೆ. ಆತನ ಜೊತೆ ವಿಚಾರಣಾಧೀನ ಖೈದಿಯಾಗಿರುವ ಮ್ಯಾನೇಜರ್ ನಾಗರಾಜ್ ಕೂಡ ಇದ್ದಾನೆ, ಮತ್ತೊಬ್ಬನನ್ನು ಕುಳ್ಳ ಸೀನ ಎಂದು ಗುರುತಿಸಲಾಗಿದೆ.


