Select Page

Advertisement

ಕೈಯಲ್ಲಿ ಸಿಗರೇಟು ; ಮುಖದಲ್ಲಿ ನಗು ; ಜೈಲಲ್ಲಿ ಬಿಂದಾಸ್ ಆಗಿರುವ ನಟ ದರ್ಶನ್

ಕೈಯಲ್ಲಿ ಸಿಗರೇಟು ; ಮುಖದಲ್ಲಿ ನಗು ; ಜೈಲಲ್ಲಿ ಬಿಂದಾಸ್ ಆಗಿರುವ ನಟ ದರ್ಶನ್

ಬೆಂಗಳೂರು : ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರನಟ ದರ್ಶನ್ ನದ್ದೆ ಎನ್ನಲಾದ ಪೋಟೋ ವೈರಲ್ ಆಗಿದ್ದು, ಕೈಯಲ್ಲಿ ಚಹಾ ಜೊತೆಗೆ ಸಿಗರೇಟು ಹಿಡಿದು ಕುಳಿತಿರುವ ಪೋಟೋ ವೈರಲ್ ಆಗಿದ್ದು, ಜೈಲು ಅಧಿಕಾರಿಗಳ ಮೇಲೆ ಅನುಮಾನ ಮೂಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಮನೆ ಊಟ ಕೊಡಲು ಸಾಧ್ಯವಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಹೇಳಿದ್ದರು.

ಆದರೆ ಇದೀಗ ದರ್ಶನ್‌ ವಿಲ್ಸನ್ ಗಾರ್ಡನ್‌ ನಾಗನ ಜೊತೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಿರುವ ಫೋಟೊ ವೈರಲ್ ಆಗಿದ್ದು, ಪರಪ್ಪನ ಅಗ್ರಹಾರದಲ್ಲಿ ಕೂಡ ದರ್ಶನ್‌ಗೆ ರಾಜಾಥಿತ್ಯ ಸಿಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

65 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ, ಮನೆ ಊಟ ಇಲ್ಲದೆ ತೂಕ ಕಳೆದುಕೊಂಡಿದ್ದಾರೆ. ಧ್ಯಾನ ಮಾಡುತ್ತಿದ್ದಾರೆ, ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು, ಆದರೆ

ಇದೀಗ ವೈರಲ್ ಆಗಿರುವ ಫೋಟೊ ನೋಡಿದರೆ ಎಲ್ಲವೂ ಸುಳ್ಳು ಎನ್ನುವ ಅನುಮಾನ ಮೂಡುತ್ತಿದೆ. ದರ್ಶನ್ ಜೈಲಿನಲ್ಲಿ ಕೂಡ ಆರಾಮಾಗಿ ಕಾಲ ಕಳೆಯುತ್ತಿದ್ದು, ಸಿಗರೇಟು ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೊ ಅದಕ್ಕೆ ಸಾಕ್ಷಿಯಾಗಿದೆ.

ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಸಿಗರೇಟು ಸೇದುತ್ತಾ ಹರಟೆ ಹೊಡೆಯುತ್ತಿದ್ದಾರೆ. ಆತನ ಜೊತೆ ವಿಚಾರಣಾಧೀನ ಖೈದಿಯಾಗಿರುವ ಮ್ಯಾನೇಜರ್ ನಾಗರಾಜ್ ಕೂಡ ಇದ್ದಾನೆ, ಮತ್ತೊಬ್ಬನನ್ನು ಕುಳ್ಳ ಸೀನ ಎಂದು ಗುರುತಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!