ಏಳು ತಿಂಗಳ ನಂತರ ಕೆಲಸಕ್ಕೆ ಮರಳಿದ ಐಪಿಎಸ್ ಡಿ. ರೂಪಾ
ಬೆಂಗಳೂರು : ವೈಯಕ್ತಿಕ ಕಾರಣಕ್ಕಾಗಿ ಸಾರ್ವಜನಿಕವಾಗಿ ಕಿತ್ತಾಡಿಕೊಂಡು ಅಂದಿನ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದ ಐಪಿಎಸ್ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರ ಸ್ಥಳ ನಿಯೋಜನೆ ಮಾಡಿದೆ.
ಏಳು ತಿಂಗಳು ಬಳಿಕ ಆಂತರಿಕ ಭದ್ರತಾ ವಿಭಾಗದ ಐಜಿಯಾಗಿ ಡಿ. ರೂಪಾ ( D. Roopa Moudgil ) ಅವರನ್ನು ನಿಯೊಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ( Rohini Sindhuri ) ಅವರನ್ನು ಕರ್ನಾಟಕ ಗೆಜೆಟಿಯರ್ ಡಿಪಾರ್ಟ್ಮೆಂಟ್ ಮುಖ್ಯ ಸಂಪದಾಕರನ್ನಾಗಿ ನೇಮಕ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಸಾರ್ವಜನಿಕವಾಗಿ ಇಬ್ಬರೂ ಅಧಿಕಾರಿಗಳು ಜಗಳ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಡಿ. ರೂಪಾ ಅವರು ರೋಹಿಣಿ ಅವರ ವೈಯಕ್ತಿಕ ಪೋಟೋಗಳನ್ನು ಸಾರ್ವಜನಿಕವಾಗಿ ಹರಿಬಿಟ್ಟಿದ್ದರು. ಸಧ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ.

