Select Page

Advertisement

ಮೋದಿ ಸರ್ಕಾರ ಬಂಪರ್ ಕೊಡುಗೆ : ಗ್ಯಾಸ್ ಬೆಲೆ ಕಡಿಮೆ ಮಾಡ್ಯಾರ ನೋಡ್ರಿ..!

ಮೋದಿ ಸರ್ಕಾರ ಬಂಪರ್ ಕೊಡುಗೆ : ಗ್ಯಾಸ್ ಬೆಲೆ ಕಡಿಮೆ ಮಾಡ್ಯಾರ ನೋಡ್ರಿ..!

ನವದೆಹಲಿ : ಕೇಂದ್ರ ಸರ್ಕಾರ ಕೊನೆಗೂ ಜನರ ಹೊರೆ ಇಳಿಸುವ ಕೆಲಸ ಮಾಡಿದ್ದು ಗೃಹ ಬಳಕೆಯ ಸಿಲಿಂಡರ್ ಗ್ಯಾಸ್ ಬೆಲೆ 200 ರೂ ಇಳಿಕೆ ಮಾಡಿದೆ.

ಉಜ್ವಲ ಯೋಜನೆ ಅಡಿಯಲ್ಲಿ ಇರುವ ಫಲಾನುಭವಿಗಳಿಗೆ ಇದರ ಲಾಭ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಜನರಿಗೆ ಅನುಕೂಲ ಆಗಲಿದೆ.

ಆಗಸ್ಟ್ 1 ರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಉಪಯೋಗ ಸಿಲಿಂಡರ್ ಬೆಲೆಯನ್ನು 100 ರೂ ಗೆ ಇಳಿಕೆ ಮಾಡಿತ್ತು. ಆದರೆ ಉಜ್ವಲ ಯೋಜನೆಯಡಿ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು 200 ರೂ ಸಬ್ಸಿಡಿ ದೊರೆಯಲಿದೆ.

ಒಟ್ಟಿನಲ್ಲಿ ಬೆಲೆ ಏರಿಕೆ ವಿರುದ್ಧ ಜನ ಆಕ್ರೋಶ ಹೊರ ಹಾಕುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಇದರಿಂದ ಬಡವರ ಹೊರೆ ಇಳಿಕೆಯಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!