ಕರೆಂಟ್ ಬಿಲ್ ಕೇಳಿದಕ್ಕೆ ಜನರ ಆಕ್ರೋಶ ; ಸಿದ್ದರಾಮಯ್ಯ ಕಟ್ತೀನಿ ಅಂದಿಲ್ವ ಎಂದು ಆವಾಜ್..!
ಬೆಳಗಾವಿ : ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡ್ ಪಜೀತಿ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಉಚಿತ ವಿದ್ಯುತ್ ಕೊಡುವ ಯೋಜನೆ ಜಾರಿಗೆ ಜನ ಒತ್ತಾಯಿಸುತ್ತಿದ್ದು ಕರೆಂಟ್ ಬಿಲ್ ಕಟ್ಟಲ್ಲ ಸಿದ್ದರಾಮಯ್ಯ ಕಟ್ತಾನೆ ಎಂದು ಆವಾಜ್ ಹಾಕುತಿದ್ದಾರೆ.
ಖಾನಾಪುರ ತಾಲೂಕಿನ ಗೋಸೇನಟ್ಟಿ ಗ್ರಾ.ಪಂ ಯಲ್ಲಿ ಘಟನೆ ನಡೆದಿದ್ದು ವಿದ್ಯು ಬಿಲ್ ಕೇಳಲು ಬಂದ ಹೆಸ್ಕಾಂ ಸಿಬ್ಬಂದಿಗೆ ಜನ ಆವಾಜ್ ಹಾಕಿದ್ದಾರೆ. ಸರ್ಕಾರ ಹೇಳಿದೆ, ಕರೆಂಟ್ ಬಿಲ್ ಯಾರೂ ಕಟ್ಟಬೇಡಿ ಎಂದು. ಪದೇ ಪದೇ ಬಂದು ಕಿರುಕುಳ ನೀಡುತ್ತಿರುವುದು ಸರಿ ಅಲ್ಲ ಎಂದು ಜನ ಆಕ್ರೋಹ ಹೊರಹಾಕುತ್ತಿದ್ದಾರೆ.
ಅಷ್ಟೇ ಅಲ್ಲದೆ ಅನೇಕ ಗ್ರಾಮಗಳಲ್ಲಿ ಜನ ಮೀಟರ್ ವಯರ್ ತೆರವು ಮಾಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹೆಸ್ಕಾಂ ಅಧಿಕಾರಿಗಳು ಬಿಲ್ ಕೇಳಿದರು ಸರಿಯಾದ ಸ್ಪಂದನೆ ಮಾಡುತ್ತಿಲ್ಲ. ಇದರಿಂದ ರಾಜ್ಯದ ನೌಕರರಿಗೆ ಹೊಸ ಸಂಕಷ್ಟ ಬಂದೊದಗಿದೆ. ಹಾಗೆಯೇ ಸರ್ಕಾರ ಬೇಗ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಕೂಡಾ ಇದೆ.
**********************
ಬಸ್ ಟಿಕೆಟ್ ಹಣ ಕೊಡಲ್ಲ, ಸಿದ್ದರಾಮಯ್ಯ ಕೊಡ್ತಾನೆ ಎಂದ ಮಹಿಳೆ : ಕಂಡಕ್ಟರ್ ಗೆ ತಲೆನೋವು
ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳಿಂದ ಸಧ್ಯ ಸರ್ಕಾರಿ ನೌಕರರು ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರು ಟಿಕೆಟ್ ಗೆ ಹಣ ಕೊಡದೆ ಕಂಡಕ್ಟರ್ ವಿರುದ್ಧ ಜಗಳಕ್ಕೆ ನಿಂತ ಪ್ರಸಂಗ ನಡೆಯುತ್ತಿವೆ.
ಹೌದು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಯಲ್ಲಿ ಒಂದಾದ ಮಹಿಳೆಯತಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಎಲ್ಲೆಡೆ ಆಗ್ರಹ ಹೆಚ್ಚಾಗಿದೆ. ಜೊತೆಗೆ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರು ಟಿಕೆಟ್ ಪಡೆಯುತ್ತಿಲ್ಲ. ಇದರಿಂದ ಕಂಡಕ್ಟರ್ ಗೆ ತಲೆನೋವಾಗಿದೆ. ಜನರನ್ನು ಪ್ರಶ್ನೆ ಮಾಡಿದರೆ ಸರ್ಕಾರದ ಕಡೆ ಬೊಟ್ಟು ಮಾಡುತ್ತಾರೆ.
ಟಿಕೆಟ್ ಕೊಟ್ಟು ಹಣ ಕೇಳಿದರೆ ಮಹಿಳೆಯರು ಸಿದ್ದರಾಮಯ್ಯ ಕೊಡ್ತಾನೆ ಎಂದು ಉತ್ತರ ಕೊಡುತ್ತಿದ್ದಾರೆ. ಇನ್ನೂ ಸರ್ಕಾರ ಆದೇಶ ಮಾಡಿಲ್ಲ ಎಂದರೆ ನಮ್ಮನ್ನ ಕೇಳಬೇಡಿ ಎಂಬ ಉತ್ತರ ಜನರಿಂದ ಬರುತ್ತಿದೆ. ಇದರಿಂದ ಬಸ್ ಕಂಡಕ್ಟರ್ ಗೆ ಯಾರ ಮಾತು ಕೇಳಬೇಕು ಎಂಬ ಗೊಂದಲ ಮೂಡಿದೆ.
ಇಷ್ಟೇ ಅಲ್ಲದೆ ಉಚಿತ ಅಕ್ಕಿ, ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು ಎರಡು ಸಾವಿರ, ಉಚಿತ ಕರೆಂಟ್ ಬಿಲ್. ಸೇರಿದಂತೆ ಅನೇಕ ಬಿಟ್ಟಿ ಯೋಜನೆ ನೀಡಿದ್ದ ಕಾಂಗ್ರೆಸ್ ಗೆ ಈಗ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.


