ಹೆಲ್ಮೆಟ್ ವಿಚಾರವಾಗಿ ಯುವಕನ ಮೇಲೆ ಹಲ್ಲೆ ; ಪೊಲೀಸರು ಹೇಳಿದ್ದೇನು..?.
							ಚಿಕ್ಕೋಡಿ : ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನಿಗೆ ಮನಬಂದಂತೆ ಅಂಕಲಿ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಸಂತ್ರಸ್ತ ಋಷಿಕೇಶ್ ಗಜಾನನ್ ಲಿಮಗೆಡೆ ಆರೋಪಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮಿರಜ್ ನಿವಾಸಿ ಋಷಿಕೇಶ್ ಶುಕ್ರವಾರ ಸಂಜೆ ಚಿಕ್ಕೋಡಿ- ಮೀರಜ್
ಮಾರ್ಗವಾಗಿ ತೆರಳುವ ವೇಳೆ ಅಂಕಲಿ ಠಾಣೆ ಪೊಲೀಸರು ವಾಹನ ತಡೆದು ಹೆಲ್ಮೆಟ್ ಇಲ್ಲದ ಕಾರಣ ಕೇಳಿದ್ದಾರೆ. ಈ ವೇಳೆ ವಾಗ್ವಾದ ನಡೆದಿದ್ದು ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಅವರು. ಹೆಲ್ಮೆಟ್ ಧರಿಸದ ಕಾರಣಕ್ಕೆ 500 ರೂ. ದಂಡ ಕಟ್ಡಲು ಹೇಳಿದ ಸಂದರ್ಭದಲ್ಲಿ ಯುವಕ ವಿಚಿತ್ರ ವರ್ತನೆ ತೋರಿದ್ದಾನೆ. ಈ ಹಿನ್ನಲೆಯಲ್ಲಿ ಆತನನ್ನು ಬಿಎನ್ ಎಸ್ ಭದ್ರತಾ ವಿಭಾಗದ ಅಡಿಯಲ್ಲಿ ವಶಕ್ಕೆ ಪಡೆದು ತಹಶಿಲ್ದಾರರ ಮುಂದೆ ಹಾಜರುಪಡಿಸಲಾಗಿದ್ದು, ಆತನ ಮೇಲೆ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
						
			
			
			
			
			
			
			

			
			
			
			
			
			
			
			
			