Select Page

Advertisement

ಅಕ್ಕನ ಕೈ ಹಿಡಿದು ಶಾಲೆಗೆ ಹೋದ ಮಗು ಅಪಘಾತದಲ್ಲಿ ಸಾವು ; ಶಾಲೆಯ ಮೊದಲ ದಿನವೇ ದುರಂತ..!

ಅಕ್ಕನ ಕೈ ಹಿಡಿದು ಶಾಲೆಗೆ ಹೋದ ಮಗು ಅಪಘಾತದಲ್ಲಿ ಸಾವು ; ಶಾಲೆಯ ಮೊದಲ ದಿನವೇ ದುರಂತ..!


ಚಿಕ್ಕೋಡಿ : ಅಕ್ಕನ ಜೊತೆಗೆ ಮೊದಲನೇ ದಿನ ಶಾಲೆಗೆ ತೇರಳಿದ ಬಾಲಕನಿಗೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವು ಸಂಭವಿಸಿ ದಾರುಣ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕನವಾಡಿ ಹೊರವಲಯದಲ್ಲಿ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ಮೇಲೆ ಬುಧವಾರ ಸಂಜೆ ಘಟನೆ ಸಂಭವಿಸಿದೆ. ಮುತ್ತುರಾಜ್ ಮುಗಳಖೋಡ್(5) ಮೃತ ದುರ್ದೈವಿ.

ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿ ದಾಟುತ್ತಿದ್ದ ಬಾಲಕನಿಗೆ ಮೊದಲು ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಕಳಗೆ ಬಿದ್ದ ಬಾಲಕನ ಮೇಲೆ ಮತ್ತೊಂದು ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ,
ಬುಧವಾರದಂದು ತನ್ನ ಅಕ್ಕಂದಿರರೊಂದಿಗೆ ಮೊದಲ ಬಾರಿಗೆ ನಾಗನೂರ ಪಟ್ಟಣದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಹೋಗಿದ್ದ ಮುತ್ತುರಾಜ ಮುಗಳಖೋಡ (5) ಮೃತ ಬಾಲಕ.

ಸಂಜೆ ಶಾಲೆಯ ಅನಧಿಕೃತ ವಾಹನವೊಂದರಲ್ಲಿ ಮನೆಯ ಪಕ್ಕದಲ್ಲಿರುವ ಹೆದ್ದಾರಿಯ ಮೇಲೆ ವಾಹನ ನಿಲ್ಲಿಸಿ, ವಿದ್ಯಾರ್ಥಿಗಳನ್ನು ಕೆಳಗಿಸಿ ವೇಳೆ ವಿದ್ಯಾರ್ಥಿಗಳ ಜೊತೆಗೆ ಬಾಲಕ ಕೂಡ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಕೆಳಗೆ ಮೇಲೆ ಬಿದ್ದ ವೇಳೆ ಮತ್ತೊಂದು ಅಪರಿಚಿತ ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ, ಕೂಡಲೇ ಶಾಲಾ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, 1ನೇ ತರಗತಿಗೆ ದಾಖಲು ಮಾಡಲು ಸಿದ್ದರಾಗಿದ್ದಿವಿ ಆದರೆ ಮೊದಲ ದಿನವೇ ಶಾಲೆಗೆ ಹೋಗಿದ್ದ ಮಗ ಜೀವಂತವಾಗಿ ಮನೆಗೆ ಬರಲಿಲ್ಲ ಎಂದು ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸಿದರು.

ಅಪಘಾತ ಮಾಡಿರುವ ಬೈಕ್ ಸವಾರ ಹಾಗೂ ಕಾರ್ ಚಾಲಕ ವಾಹನ ನಿಲ್ಲಿಸದೆ ಹೋಗಿದ್ದು ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!