ಡಿಸಿಸಿ ಚುನಾವಣೆ ; ಚನ್ನರಾಜ ಹಟ್ಟಿಹೊಳಿ ಅವಿರೋಧ ಆಯ್ಕೆ..!
ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಇತರೆ ವರ್ಗದಿಂದ ಸ್ಪರ್ಧಿಸಿದ್ದ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರ ಪ್ರತಿಸ್ಪರ್ಧಿ ಆಗಿದ್ದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದ ಹಿನ್ನಲೆಯಲ್ಲಿ ಚನ್ನರಾಜ ಹಟ್ಟಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಲಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹುದ್ದೆ ಹಿಡಿದ ಒಂದೇ ವಾರದಲ್ಲಿ ಬೆಳಗಾವಿ ಡಿಸಿಸಿ ನಿರ್ದೇಶಕ ಸ್ಥಾನ ಗೆಲ್ಲುವ ಮೂಲಕ ಡಬಲ್ ಖುಷಿಯಲ್ಲಿ ಇದ್ದಾರೆ.


