ಬೆಳಗಾವಿ : ನಗರ ಸಾರಿಗೆ ಬಸ್ ಪಲ್ಟಿ ; ಹಲವರಿಗೆ ಗಾಯ
ಬೆಳಗಾವಿ : ನಗರದ ಸುವರ್ಣ ವಿಧಾನಸೌಧದ ರಾಷ್ಟ್ರೀಯ ಹೆದ್ದಾರಿ ಬಳಿ ನಗರ ಸಾರಿಗೆ ಬಸ್ ಪಲ್ಟಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಬಸ್ ನಲ್ಲಿ ಹತ್ತು ಜನ ಪ್ರಯಾಣಿಕರು ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಬಸ್ ಪಲ್ಟಿಯಾಗಿದ್ದು ಕಂಡಕ್ಟರ್ ಹಾಗೂ ಇನ್ನೊಂದು ಯುವತಿಗೆ ಗಂಭೀರ ಗಾಯವಾಗಿವೆ. ಬಸ್ ನಲ್ಲಿ 10 ಜನ ಪ್ರಯಾಣಿಸುತ್ತಿದ್ದರು.
ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.


