ಮಹಾರಾಷ್ಟ್ರದಲ್ಲಿ ಬಿಜೆಪಿ ಕಮಾಲ್ ; ಮಹಾಯುತಿ ಕೈ ಬಿಡದ ಜನ

ಮುಂಬೈ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ಬಿಜೆಪಿ ಮೈತ್ರಿಕೂಟ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಕಮಾಲ್ ಮಾಡಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿರೋಧಿಗಳಿಗೆ ಟಕ್ಕರ್ ಕೊಡುವ ಮೂಲಕ ಫಡ್ನವಿಸ್ ಹಾಗೂ ಏಕನಾಥ ಶಿಂಧೆ ಜೋಡಿ ಮುನ್ನಡೆ ಕಾಯ್ದುಕೊಂಡಿದೆ.
ಮಹಾರಾಷ್ಟ್ರದ 29 ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬರುತ್ತಿದ್ದು ಭಾಗಶಃ ಬಿಜೆಪಿ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ. ದಶಕಗಳ ನಂತರ ಒಂದಾಗಿದ್ದ ಠಾಕ್ರೆ ಸಹೋದರರು ಹಿನ್ನಡೆ ಅನುಭವಿಸಿದ್ದರೆ, ಶರದ್ ಪವಾರ್ ಹಾಗೂ ಕಾಂಗ್ರೆಸ್ ಮತ್ತೊಮ್ಮೆ ನೆಲಕಚ್ಚಿದೆ.
ಸಧ್ಯದ ಮಾಹಿತಿ ಪ್ರಕಾರ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ 227 ಸ್ಥಾನಗಳ ಪೈಕಿ ಬಿಜೆಪಿ ಹಾಗೂ ಏಕನಾಥ ಶಿಂಧೆ ಶಿವಸೇನೆ 130 ರ ಗಡಿ ದಾಟಿದೆ, ಇನ್ನೂ ಠಾಕ್ರೆ ಸಹೋದರರು 70 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ ಕಾಂಗ್ರೆಸ್ ಹಾಗೂ ಎನ್ಸಿಪಿ 20 ರ ಗಡಿಯಲ್ಲಿವೆ.
ಅಷ್ಟೇ ಅಲ್ಲದೆ ಇನ್ನುಳಿದ 28 ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಪುಣೆಯ 162 ಸ್ಥಾನಗಳ ಪೈಕಿ 92 ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ನಾಗ್ಪುರದ 151 ಸ್ಥಾನಗಳ ಪೈಕಿ 113 ರಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆಯಲ್ಲಿದೆ.

