ಬೆಳಗಾವಿ : ಕುಡಿಯಲು ಬಾರ್ ಗೆ ಬಂದ ಗ್ರಾಹಕನ ಜೊತೆ ವಾಗ್ವಾದ ನಡೆಸಿದ್ದಲ್ಲದೆ ಆತನಿಗೆ ರಕ್ತ ಬರುವಂತೆ ಥಳಿಸಿದ ಘಟನೆ ಬೆಳಗಾವಿ ನಗರದಲ್ಲಿ ಸೋಮವಾರ ನಡೆದಿದೆ.
ನಗರದ ರಾಮದೇವ್ ಎದುರಿನ ಶರವಾತಿ ಬಾರ್ ಮುಂದೆ ಘಟನೆ ನಡೆದಿದ್ದು ಸರಾಯಿ ಕುಡಿಯಲು ಬಂದ ಗ್ರಾಹಕನನ್ನು ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ.
ಈ ವೇಳೆ ವ್ಯಕ್ತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು ರಕ್ತ ಸುರಿದಿದೆ. ಶರಾವತಿ ಬಾರ್ ಮಾಲಿಕನಿಗೆ ಬೈದಿದ್ದಕ್ಕೆ ಥಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ನಡು ರಸ್ತೆಯಲ್ಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಎಷ್ಟು ಸರಿ ಎನ್ನುತ್ತಿದ್ದಾರೆ ಸಾರ್ವಜನಿಕರು.


