ಅತಿಥಿ ಶಿಕ್ಷಕರಿಗೆ ಸರಕಾರದಿಂದ ಗುಡ್ ನ್ಯೂಸ್…!
ಬೆಂಗಳೂರು : ಅತಿಥಿ ಶಿಕ್ಷಕರಿಗೆ ರಾಜ್ಯ ಸರಕಾರ ಬರ್ಜರಿ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿ ಹುದ್ದೆಗಳ ಜಾಗದಲ್ಲಿ ಖಾಲಿ ಇರುವ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಗೌರವಧನ ಪಾವತಿಗೆ ಸರಕಾರ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿದೆ.
ಸಧ್ಯ ಜೂನ್ 2025 ರಿಂದ ಅಕ್ಟೋಬರ್ ವರೆಗಿನ ಗೌರವಧನ ಪಾವತಿಗೆ ಸರಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ಗೌರವಧನ ಹೆಚ್ಚಳ ಮಾಡಲಾಗಿದ್ದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10 ಸಾವಿರ ಬದಲಿಗೆ 12 ಸಾವಿರ ಸಿಗಲಿದೆ.
ಇನ್ನೂ ಸರಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ 10,500. ಬದಲಿಗೆ 12,500 ರೂ. ಸಿಗಲಿದೆ. ಪರವಿ ಪೂರ್ವ ಕಾಲೇಜು ಆಥಿತಿ ಶಿಕ್ಷಕರಿಗೆ 12 ಸಾವಿರ ಬದಲಿಗೆ 14 ಸಾವಿರ ರೂ. ಸಿಗಲಿದೆ.

