Select Page

Advertisement

ಕೃಷ್ಣನ ವೇಶದಲ್ಲಿ ಗಮನಸೆಳೆದ ಪುಟಾಣಿ ‌ಮಕ್ಕಳು

ಕೃಷ್ಣನ ವೇಶದಲ್ಲಿ ಗಮನಸೆಳೆದ ಪುಟಾಣಿ ‌ಮಕ್ಕಳು

ಬೆಂಗಳೂರು : ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಪ್ರಾಮುಖ್ಯತೆ ‌ಇದೆ. ಮಕ್ಕಳಲ್ಲಿ‌ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಶಾಲಾ‌ ಮಟ್ಟದಲ್ಲೇ ತಿಳಿಸಿ ಹೇಳಬೇಕೆಂದು ಎ ಕಿಡ್ಜ್ ಫ್ರೀ ಸ್ಕೂಲ್ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಅಭಿಪ್ರಾಯಪಟ್ಟರು.

ನಗರದ ಅತ್ತಿಬೆಲೆಯಲ್ಲಿರುವ ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಇಂದಿನ ಮಕ್ಕಳಿಗೆ ನಮ್ಮ ಭಾರತೀಯ ಧಾರ್ಮಿಕ ಶ್ರೀಮಂತಿಕೆ ಕುರಿತು ಹೇಳಿಕೊಡಬೇಕು. ಅದರಂತೆ ಮಕ್ಕಳು ಭವಿಷ್ಯದಲ್ಲಿ ಬದುಕಿನ ಜೊತೆ ಧಾರ್ಮಿಕ ಚಿಂತನೆ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶಾಲೆಯ ಪುಟಾಣಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಶದಲ್ಲಿ ಗಮನಸೆಳೆದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!