Select Page

Advertisement

ಬಳ್ಳಾರಿ ಎಸ್ಪಿ ಅಮಾನತು : ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ತಲೆದಂಡ

ಬಳ್ಳಾರಿ ಎಸ್ಪಿ ಅಮಾನತು : ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ತಲೆದಂಡ

ಬಳ್ಳಾರಿ : ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದು, ಸಧ್ಯ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅಮಾನತು ಮಾಡಿ ಸರಕಾರ ಆದೇಶ ಹೊರಡಿಸಿದೆ.

ಜನೆವರಿ 1 ರಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾದ ಸ್ವೀಕರಿಸಿದ್ದ ಕೇವಲ 24 ಗಂಟೆ ಒಳಗೆ ಐಪಿಎಸ್ ಪವನ್ ನೆಜ್ಜೂರು ತಲೆದಂಡವಾಗಿದೆ. Ballary Sp Suspend

ತನಿಖೆಗೆ ಸಿಎಂ ಸೂಚನೆ : ಖಾಸಗಿ ಬುಲೆಟ್‌ನಿಂದ ಸಾವಾಗಿದೆ ಎಂಬ ಬಳ್ಳಾರಿ ಎಸ್ ಪಿ ಮಾಹಿತಿ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ. ಏರ್ ನಲ್ಲಿ ಗನ್ ಫೈರ್ ಮಾಡಿದ್ದಾರೆ. ಅದಕ್ಕೆ ಫೈರಿಂಗ್ ಮಾಡಿರೋದು ಮನುಷ್ಯನಿಗೆ ತಗುಲಿದೆ. ರಾಜಶೇಖರ್ ಸತ್ತು ಹೋಗಿದ್ದಾರೆ.

ಯಾರ ಗನ್ ನಿಂದ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ. ಅದಕ್ಕೆ ತನಿಖೆ ಮಾಡಿ ವರದಿ ಕೊಡಿ ಎಂದು ಹೇಳಿದ್ದೇನೆ ಅಂತ ತಿಳಿಸಿದರು.

Advertisement

Leave a reply

Your email address will not be published. Required fields are marked *

error: Content is protected !!