Select Page

Advertisement

ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದ್ರೆ ಹತ್ಯೆ ಪ್ರಕರಣ ದಾಖಲಿ ; ಎಸ್ಪಿ ರಾಮರಾಜನ್

ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದ್ರೆ ಹತ್ಯೆ ಪ್ರಕರಣ ದಾಖಲಿ ; ಎಸ್ಪಿ ರಾಮರಾಜನ್




ಬೆಳಗಾವಿ : ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿ
ಬೇರೊಬ್ಬರ ಸಾವಿಗೆ ಕಾರಣವಾದರೆ ಅವರ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲಾಗುವುದು ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 800 ಕ್ಕೂ ಅಧಿಕ ಜನ ಸಾವಣಪ್ಪುತ್ತಿದ್ದಾರೆ. ರಸ್ತೆ ಅಪಘಾತ ತಡೆಗಟ್ಟುವ ಉದ್ದೇಶದಿಂದ ಕುಡಿದು ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿ ಸಾವು ನೋವು ಗಳ ಜೊತೆಗೆ ಸವಾರರಿಗೆ ಗಾಯವಾದರೂ ಆರೋಪಿ ವಿರುದ್ಧ ಬಿಎನ್ಎಸ್ ಸೆಕ್ಷನ್ 110 ಅಡಿಯಲ್ಲಿ ನರಹತ್ಯೆ ಯತ್ನ ಪ್ರಕರಣ ದಾಖಲಿಸಲಾಗುವುದು ಎಂದರು.

ಕಬ್ಬು ತುಂಬಿದ ಟ್ರ್ಯಾಕ್ಟರ್ ಸಂಚಾರ ದಟ್ಟಣೆಯಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಕಬ್ಬು ಕಟಾವು ಮಾಡುವ ಐದು ತಿಂಗಳಲ್ಲಿ ಸಾವಿಣ ಸಂಖ್ಯೆ ಅಧಿಕವಾಗುತ್ತದೆ.‌ ಇದೆಲ್ಲವನ್ನೂ ತಡೆಗಟ್ಟಲು ಕಡ್ಡಾಯವಾಗಿ ಕಬ್ಬು ತುಂಬಿದ ವಾಹನದ ಹಿಂಬದಿ ರಿಪ್ಲೆಕ್ಟರ್ ಬಟ್ಟೆ ಬಳಸಬೇಕು. ಇಲ್ಲವಾದರೆ ಅವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.

ರಸ್ತೆ ಬದಿಯಲ್ಲಿ ಕಬ್ಬು ತುಂಬಿದ ವಾಹನ ನಿಲ್ಲಿಸುವಾಗ ಕಡ್ಡಾಯವಾಗಿ ರಿಪ್ಲೆಕ್ಟರ್ ಬಳಕೆ‌ ಮಾಡಬೇಕು. ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದ್ದು ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Leave a reply

Your email address will not be published. Required fields are marked *

error: Content is protected !!