
ರೈತರ ಮುಂದೆ ತೊಡೆತಟ್ಟಿದ್ದ ಎಸ್ಪಿ ವಿರುದ್ಧ ಕ್ರಮಕ್ಕೆ ಅಶೋಕ್ ಆಗ್ರಹ

ಬೆಳಗಾವಿ : ರೈತರು ಹೆದ್ದಾರಿ ತಡೆದು ಹೋರಾಟ ಮಾಡುವ ಸಂದರ್ಭದಲ್ಲಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ರೈತರ ಮುಂದೆ ತೊಡೆತಟ್ಟಿ ಅವಾಜ್ ಹಾಕಿರುವ ಘಟನೆ ಕುರಿತಾಗಿ ಇಂದು ಸದನದಲ್ಲಿ ಪ್ರತಿಧ್ವನಿಸಿತು.
ಉತ್ತರ ಕರ್ನಾಟಕ ವಿಶೇಷ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್. ಸರ್ಕಾರ ರೈತ ವಿರೋಧಿ ನಡೆ ಹೊಂದಿದೆ. ಹೋರಾಟ ಮಾಡುವ ರೈತರ ಮುಂದೆ ಎಸ್ಪಿ ತೊಡೆ ತಟ್ಟುವುದು ದುರಹಂಕಾರ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭೂಮಿ ಹಕ್ಕುಪತ್ರದ ವಿಚಾರವಾಗಿ ಕಿತ್ತೂರು ತಾಲೂಕಿನ ರೈತರು ಹೆದ್ದಾರಿ ತಡೆದು ಪ್ರತಿಭಟನೆ ಮಾಡುವಾಗ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೆದ್ ತೊಡೆತಟ್ಟಿ ಅವಾಜ್ ಹಾಕಿದ್ದರು. ಎಸ್ಪಿ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.