Belagavi – ವಿದ್ಯುತ್ ತಗುಲಿದ ಮೊಮ್ಮಗಳನ್ನು ರಕ್ಷಿಸಲು ಹೋದ ಅಜ್ಜ, ಅಜ್ಜಿ ಸೇರಿ ಮೂವರ ಸಾವು
ಬೆಳಗಾವಿ : ವಿದ್ಯುತ್ ಶಾಟ್೯ ಸರ್ಕಿಟ್ ನಿಂದ ಬೆಳಗಾವಿಯ ಶಾಹುನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಅವಘಡ ನಡೆದಿದ್ದು ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರ ಮೃತಪಟ್ಟಿದ್ದಾರೆ.
ರಾಮಗದುರ್ಗ ತಾಲೂಕಿನ ಅರಬೆಂಚಿ ತಾಂಡಾದಿಂದ ಶಾಹುನಗರದಲ್ಲಿ ವಾಚಮೆನ್ ಕೆಲಸ ಮಾಡುತ್ತಿದ್ದ ಈರಪ್ಪಾ ಲಮಾಣಿ (50), ಶಾಂತವ್ವ ಲಮಾಣಿ (45) ಹಾಗೂ ಇವರ ಮೊಮ್ಮಗಳು ಅನ್ನಪೂರ್ಣ ಲಮಾಣಿ ( 8) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮನೆಯಲ್ಲಿ ನೀರು ಕಾಯಿಸಲು ಕ್ವಾಯಿಲ್ ಹಾಕಿದ ಸಂದರ್ಭದಲ್ಲಿ ಅದನ್ನು ತೆಗೆಯಲು ಹೋದ ವೇಳೆ ಮೂವರು ಮೃತಪಟ್ಟಿದ್ದಾರೆ. ಮೊಮ್ಮಗಳನ್ನು ಕಾಪಾಡಲು ಹೋಗಿ ಅಜ್ಜ ಹಾಗೂ ಅಜ್ಜಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

