ಬೆಳಗಾವಿ : ಕಳ್ಳತನ ಆರೋಪದಡಿ ನಾಲ್ವರು ಇರಾನಿ ಪ್ರಜೆಗಳ ಬಂಧನ
ಬೆಳಗಾವಿ : ಇರಾನ್ ನಿಂದ ಭಾರತಕ್ಕೆ ಬಂಧಿದ್ದ ನಾಲ್ವರ ವೀಸಾ ಅವಧಿ ಮುಗಿದಿದ್ದರು ತಲೆಮರೆಸಿಕೊಂಡು ಬೆಳಗಾವಿ ನಗರದ ಹಲವೆಡೆ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಬೆಳಗಾವಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ನಗರದ ಶಗುಣ ಟ್ರೇಡರ್ಸ್ ಗೆ ನಾಲ್ವರು ಇರಾನಿ ಪ್ರಜೆಗಳು ಗ್ರಾಹಕರಾಗಿ ಬಂದಿದ್ದರು. ಕೆಲಸಗಾರರ ಗಮನವನ್ನು ಬೇರೆಡೆಗೆ ಸೆಳೆದು ಮೋಸ ಮಾಡಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಖಡೇಬಜಾರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನುಬಿದ್ದ ಬೆಳಗಾವಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1] BAHMAN BINIAZ S/O ABDOLHOSSEIN, AGE: 36 YRS, 2] HABIBEH MOGHOL D/O HASSAN, AGE: 60 YRS, 3] SHEIDA KARIMIZADEH D/O GHOLAM, AGE: 20 YRS, 4] KARIM DAVALOO S/O AHMAD, ಬಂಧಿತ ಆರೋಪಿಗಳು.
ಆರೋಪಿತರಿಂದ ಕಳ್ಳತನ ಮಾಡಿದ ನಗದು ಹಣ, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಟೊಯೊಟಾ ಕೊರೊಲಾ ಅಲ್ಟೀಸ್ ಕಾರು ಮತ್ತು ಆರೋಪಿತರ 07 ಮೊಬೈಲ್ಗಳು ಸೇರಿ ಒಟ್ಟು 14 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ಮೇಲೆ 380 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರ ಪತ್ತೆಹಚ್ಚುವಲ್ಲಿ ಯಶಸ್ವಿಯಾದ, ಖಡೇಬಜಾರ ಎಸಿಪಿ ಅರುಣ್ ಕೊಳೂರ್, ಪಿಐ ಡಿ.ಪಿ ನಿಂಬಾಳಕರ, ಪಿಎಸ್ಐ ಆನಂದ ಆದಗೊಂಡ, ಸಿಬ್ಬಂದಿಗಳಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ, ಎಮ್ ವಿ ಅರಳಗುಂಡಿ, ವಿ ವಾಯ್ ಗುಡಿಮೇತ್ರಿ, ಜಿ ಪಿ ಅಂಬಿ ಕಾರ್ಯವನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


